ದಿನಾಂಕ:೧೨.೧೧.೨೦೨೧ ರಂದು ಶುಕ್ರವಾರದಿ ತೋಟಗಾರ್ಸ್ಕೋ-ಆಪರೇಟಿವ್ ಸೇಲ್ ಸೊಸೈಟಿಯ ಹಸಿ ಅಡಿಕೆ ಟೆಂಡರ್ ವ್ಯವಸ್ಥೆಯನ್ನು ಯಲ್ಲಾಪುರ ನಾಕಾದ ಸನಿಹ ಪಂಚವಟಿ ಹೋಟೆಲ್ ಮುಂಭಾಗದಲ್ಲಿರುವ ಸಂಘದಜಾಗದಲ್ಲಿಉದ್ಘಾಟಿಸಲಾಯಿತು. ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ರಾಮಕೃಷ್ಣ ಹೆಗಡೆ ಕಡವೆ ಇವರು ರಿಬ್ಬನ್ ಕತ್ತರಿಸುವ ಮೂಲಕ ಹಸಿ ಅಡಿಕೆ ಟೆಂಡರ್ ವ್ಯವಸ್ಥೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಶ್ರೀ ಸಿ.ಎನ್. ಹೆಗಡೆ ಹೂಡ್ಲಮನೆ, ಶ್ರೀ ಸೀತಾರಾಮ ಎಮ್. ಹೆಗಡೆ ನೀರ್ನಳ್ಳಿ ಇವರು ಹಾಗೂ ವ್ಯಾಪಾರಸ್ಥರು, ಸದಸ್ಯರುಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಹಸಿ ಅಡಿಕೆಟೆಂಡರ್ ಪ್ರಕ್ರಿಯೆ ಪ್ರತಿ ದಿನ ನಡೆಸುವ ಮೂಲಕಪ್ರತಿ ದಿನ ಮಾರಾಟ ವ್ಯವಸ್ಥೆಒದಗಿಸಲಾಗಿದೆ. ರೈತ ಸದಸ್ಯರು ಕೂಲಿ ಕಾರ್ಮಿಕರ ತೊಂದರೆಯಿಂದಾಗಿ ತಾವು ಬೆಳೆದ ಬೆಳೆಯನ್ನು ಫಸಲುಗುತ್ತಿಗೆ ನೀಡುತ್ತಿರುವುದರಿಂದಸಂಘದಲ್ಲಿ ಸದಸ್ಯರ ಪತ್ತು ಬೆಳೆಯದೇ ಇರುವುದನ್ನು ಗಮನಿಸಿ ಸಂಘದಿಂದ ಹಸಿ ಅಡಿಕೆ ಟೆಂಡರ್ ವ್ಯವಸ್ಥೆ ಕಲ್ಪಿಸಲಾಗಿದೆ. ರೈತ ಸದಸ್ಯರುಇದರ ಪ್ರಯೋಜನ ಪಡೆದು ಸಂಘದಲ್ಲಿತಮ್ಮ ಪತ್ತನ್ನು ಸ್ಥಿರವಾಗಿಟ್ಟುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.