ಕುಮಟಾ : ತಾಲೂಕಿನಲ್ಲಿ ಇಂದು ಗುಡುಗು ಸಹಿತ ಮಳೆ ಸುರಿದಿದ್ದು, ಗುಡಿಗು ಸಹಿತ ಭಾರೀ ಮಳೆಗೆ ಜನತೆ ಕಂಗಾಲಾಗಿದ್ದಾರೆ. ತಾಲೂಕಿನ ಕತಗಾಲದ ಯಲವಳ್ಳಿಯಲ್ಲಿ ಸಿಡಿಲು ಬಡಿದು ಮನೆಯ ಗೋಡೆಗಳು ಬಿರುಕುಬಿಟ್ಟಿದ್ದು, ಮನೆ ಛಿದ್ರವಾಗಿದೆ ಎನ್ನಲಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಇಂದು ಸಂಜೆ ಬಡಿದ ಗುಡುಗು ಸಿಡಿಲಿನಿಂದ ಭಾರೀ ಶಬ್ದ ಕೇಳಿಬಂದಿದೆ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯರು ಸತ್ವಾಧಾರ ನ್ಯೂಸ್ ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ತಾಲೂಕಿನ ಯಲವಳ್ಳಿಯ ನಾಗರಾಜ ಮಡಿವಾಳ ಹೊಸಮನೆ, ಅನ್ನುವವರ ಮನೆ ಸಿಡಿಲಿಗೆ ಛಿದ್ರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಡಿಲು ಬಿದ್ದ ಪರಿಣಾಮ ಮನೆಯ ಗೋಡೆಗಳು ಬಿರುಕು ಬಂದಿದ್ದಲ್ಲದೆ ಮನೆಯ ಪಾತ್ರೆ ಪಗಡೆಗಳು ಚಲ್ಲಾಪಿಲ್ಲಿಯಾಗಿದೆ ಎಂದು ಹೇಳಲಾಗಿದೆ. ಸಿಡಿಲು ಬಡಿದಿದ್ದರಿಂದ ಜನತೆ ಕಂಗಾಲಾಗಿದ್ದಾರೆ. ಮನೆಯ ಹಂಚುಗಳು ಛಿದ್ರವಾಗಿದ್ದು, ಮನೆಯ ಒಳಗೆ ಇದ್ದ ವಸ್ತುಗಳಿಗೂ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಮನೆಯವರು ಕಂಗಾಲಾಗಿದ್ದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಭೇಟಿ ನೀಡಿ ಪೂರ್ಣ ವಿಷಯ ಅರಿತು ಮುಂದಿನ ಪ್ರಕ್ರಿಯೆ ಕೈಗೊಳ್ಳುವ ನಿರೀಕ್ಷೆ ಇದೆ.