ಕುಮಟಾ : ದೂರದ ಕಾಸರಗೋಡಿನಿಂದ ಅತ್ಯಂತ ಅಭಿಮಾನದಿಂದ ಉತ್ತರ ಕನ್ನಡ ಜಿಲ್ಲೆಗೆ ಬಂದು ಭಾಷೆ, ಕಲೆ, ಸಂಸ್ಕøತಿ ಬಗ್ಗೆ ಕಾಳಜಿ ಮೂಡಿಸುತ್ತಿರುವ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ರಂಗ ಕರ್ಮಿ, ಸಿನಿಮಾ ನಿರ್ದೇಶಕ, ನಟ ಕಾಸರಗೋಡು ಚಿನ್ನಾ ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದ ಶಾಸಕ ದಿನರಕ ಶೆಟ್ಟಿ ತಿಳಿಸಿದರು.
ಕುಮಟಾದ ಐಕ್ಯ ಸಂಸ್ಥೆ ಹಾಗೂ ಉತ್ತರ ಕನ್ನಡ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ಕಾಸರಗೋಡು ಚಿನ್ನಾ ಅವರು ಅನುವಾದಿಸಿದ
ಸೂಣೆ, ಸೂಣೆ ಬಾಲ ಮತ್ತು ತ್ರೀ ಭಾಷಾ ರಂಗ ನಾಟಕಗಳು ಕೃತಿ ಬಿಡುಗಡೆ ಹಾಗೂ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿ.
ಮಲೆಯಾಳಿ, ತುಳು, ಕೊಂಕಣಿ ಹಾಗೂ ಕನ್ನಡ ಭಾಷೆಯ ಸೇತುವೆಯಂತೆ ಕೆಲಸ ಮಾಡುವ ಕಾಸರಗೋಡು ಚಿನ್ನಾ ಅವರು ಅನೇಕ ಕೃತಿಗಳನ್ನು ಅನುವಾದಿಸಿ ಈ ಭಾಷಿಕರ ಮೆಚ್ಚಗೆ ಗಳಿಸಿದ್ದಾರೆ ಎಂದು ಹೇಳಿದರು.
ಸೂಣೆ, ಸೂಣೆ ಬಾಲ ಕೃತಿ ಬಿಡುಗಡೆ ಮಾಡಿದ ಕೊಂಕಣಿ ಪರಿಷದ್ ಉಪಾಧ್ಯಕ್ಷ ಮುರಳಿಧರ ಪ್ರಭು, ಸಂಸ್ಕøತಿಯಿಲ್ಲದಿದ್ದರೆ ಎಂತ ಶ್ರೀಮಂತ ಬದುಕಿಗೂ ಅರ್ಥವಿಲ್ಲ. ಕಲೆ, ಸಂಸ್ಕøತಿ, ಭಾಷೆಯ ಅಭಿಮಾನ ನಿಧಾನವಾಗಿ ನಶಿಸುತ್ತಿದೆ. ಅವುಗಳ ಬಗ್ಗೆ ನಿರಂತರ ಕೆಲಸ ಮಾಡುವ ಸಂಸ್ಥೆಗಳು ಬೇಕಾಗಿವೆ ಎಂದರು.
ತ್ರೀ ಭಾಷಾ ರಂಗ ನಾಟಕಗಳು ಕೃತಿ ಬಿಡುಗಡೆ ಮಾಡಿದ ಸಾಹಿತಿ ಅರವಿಂದ ಕರ್ಕಿಕೋಡಿ, ನಾಲ್ಕು ಭಾಷೆಯ ವೈವಿದ್ಯ,ಜನರ ಜೀವನಪದ್ಧತಿನ್ನು ಅರ್ಥ ಮಾಡಿಕೊಂಡು ಎಲ್ಲರಿಗೂ ರುಚಿಸುವಂತೆ ಭಾಷಾಂತರ ಮಾಡುವ ಕಾಸರೋಡು ಚಿನ್ನಾ ಅವರ ಕಲಾವಂತಿಗೆ ಶ್ರೇಷ್ಠ ಎಂದರು. ಕೃತಿಕಾರ ಕಾಸರಗೋಡು ಚಿನ್ನಾ,
ಭಾಷಾಭಿಮಾನ ಬಗ್ಗೆ ಮಲೆಯಾಳಿಗರಿಂದ ಕನ್ನಡಿಗರು ಸಾಕಷ್ಟು ಕಲಿಯಬೇಕಾಗಿದೆ. ಹೊರಗೆ ಹೋಗಲಾದಗ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಹೆಸರಾಂತ ಮಲೆಯಾಳಿ ಸಾಹಿತಿ ಎನ್.ಎನ್. ಪಿಳ್ಳೆ ಸೇರಿದಂತೆ ಅನೇಕರ ಕೃತಿಗಳನ್ನು ಅನುವಾದಿಸುವ ಕೆಲಸದ ಮೂಲಕ ಖಾಲಿ ಬದುಕಿಗೆ ಅರ್ಥ ತುಂಬಿದೆ. ಅದು ಪ್ರಯೋಜನಕ್ಕೆ ಬಂದಿತು ಎಂದರು.
ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಚಿದಾನಂದ ಭಂಡಾರಿ, ಅಧ್ಯಾಪಕಿ ನಿರ್ಮಲಾ ಪ್ರಭು ಕೃತಿ ಪರಿಚಯಿಸಿದರು. ಉದ್ಯಮಿ ಧೀರು ಶಾನಭಾಗ ಅಧ್ಯಕ್ಷತೆ ವಹಿಸಿದ್ದರು. `ಐಕ್ಯ ಸಂಸ್ಥೆಯ ಅಧ್ಯಕ್ಷ ಎಂ.ಜಿ. ನಾಯ್ಕ ಸ್ವಾಗತಿಸಿದರು. ಎಂ.ಎಂ. ನಾಯ್ಕ ಸ್ವಾಗತಿಸಿದರು. ಗಣೇಶ ಜೋಶಿ ವಂದಿಸಿದರು. ಪುಸ್ತಕ ವ್ಯಾಪರಿ ಶ್ರೀಕಾಂತ ಕಾಮತ್ ಹಾಗೂ ಉದ್ಯಮಿ ಸತೀಶ ನಾಯಕ ಅವರು ಬಿಡುಗಡೆಯಾದ ಮೊದಲ ಕೃತಿ ಸ್ವೀಕರಿಸಿದರು.ಐಕ್ಯ ಸಂಸ್ಥೆಯಿಂದ ಕಾಸರಗೋಡು ಚಿನ್ನಾ ಅವರನ್ನು ಗೌರವಿಸಲಾಯತು. ನಂತರ ಕನ್ನಡ ಸಂಸ್ಕøತಿ ಇಲಾಖೆ, ಕಾಸರಗೋಡಿನ ರಂಗ ಚಿನ್ನಾರಿ ಸಂಸ್ಥೆ ಸಹಯೋಗದಲ್ಲಿ ಕಾಸರಗೋಡು ಚಿನ್ನಾ ನಿರ್ದೇಶನದ ಡಾ. ಸುಧೇಶ ರಾವ್ ಹಾಗೂ ಭೂಷಣ ಕಿಣ ಅಭಿನಯದ
ಒಬ್ಬ ಇನ್ನೊಬ್ಬ ಕಿರು ನಾಟಕ ಪ್ರದರ್ಶನ ನಡೆಯಿತು.