ಕಾರವಾರ: ಕೆಲದಿನಗಳ ಹಿಂದೆ ಬಸ್ ನಿಲ್ದಾಣದ ಶೌಚಾಲಯದಲ್ಲಿ ನವಜಾತು ಶಿಶು ಪತ್ತೆಯಾಗಿತ್ತು. ಅಷ್ಟೆ ಅಲ್ಲ ನವಜಾತ ಶಿಶು ಅಲ್ಲಿ ಮೃತಪಟ್ಟಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿಯನ್ನು ಪತ್ತೆ ಹಚ್ಚಲಾಗಿದೆ. ಮಗುವಿನ ಹುಟ್ಟಿಗೆ ಕಾರಣನಾದ ವ್ಯಕ್ತಿಯನ್ನು ಬಂಧಿಸಿಲಾಗಿದೆ.
ನಂದನಗದ್ದಾದ ನಿವಾಸಿ ಮಹಮ್ಮದ್ ಮಕ್ಕೂಲ ಅಹಮದ್ ಎಂಬಾತನೇ ಆರೋಪಿ. ಈತ ಬಾಲಕಿಯನ್ನು ಮದುವೆಯಾಗುವುದಾಗಿ ವಂಚಿಸಿ, ಬಲವಂತದಿಂದ ಸಂಬಂಧ ಬೆಳೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇವರಿಬ್ಬರಿಗೆ ಹುಟ್ಟಿದ ಮಗುವನ್ನೇ ಬಸ್ ನಿಲ್ದಾಣದ ಶೌಚಾಲಯದಲ್ಲಿ ಬಿಟ್ಟು ಹೋಗಲಾಗಿತ್ತು ಎನ್ನುವುದು ತಿಳಿದುಬಂದಿದೆ. ವಿಪರ್ಯಾಸ ಅಂದರೆ ಈ ಹಸುಗೂಸನ್ನು ತಾಯಿಯೇ ಶೌಚಾಲಯದಲ್ಲಿ ಬಿಟ್ಟು ಹೋಗಿರುವುದು ಪೋಲೀಸ್ ತನಿಖೆಯಿಂದ ತಿಳಿದುಬಂದಿದೆ.
ಯುವತಿ ಗರ್ಭಿಣಿಯಾಗಿ, ತಿಂಗಳು ತುಂಬಿದ್ದರು ಮನೆಯಲ್ಲಿ ಮಾಹಿತಿ ಇರಲಿಲ್ಲವೆಂದು ಹೇಳುತ್ತಿದೆ. ಹೊಟ್ಟೆ ನೋವಿನ ಕಾರಣದಿಂದ ಬಾಲಕಿ ಆಸ್ಪತ್ರೆಯೊಂದಕ್ಕೆ ಬಂದಿದ್ದಳು. ಆದರೆ, ವೈದ್ಯರು ಸ್ಕ್ಯಾನಿಂಗ್ ಗೆ ಸೂಚಿಸಿದ್ದು, ನೀರು ಕುಡಿಯಲು ಹೇಳಿದ್ದರು. ಈ ವೇಳೆ ಯುವತಿ ಶೌಚಾಲಯಕ್ಕೆ ಹೋಗಬೇಕೆಂದು ಹೇಳಿ ಅಲ್ಲಿಂದ ಬಂದಿದ್ದು, ಬಸ್ ನಿಲ್ದಾಣದ ಶೌಚಾಲಯಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿಯೇ ಹೆರಿಗೆಯಾಗಿದ್ದು, ಬಾಲಕಿ ಶಿಶುವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾಳೆ.
ಆದರೆ, ಶೌಚಾಲಯದಲ್ಲಿ ಶಿಶು ಪತ್ತೆಯಾಗಿರುವುದು ಎಲ್ಲೆಡೆ ಗೊತ್ತಾಗಿ, ಪೋಲೀಸರು ತನಿಖೆ ಇಳಿದಿದ್ದರು. ಸಿಸಿಟಿವಿ ಪರಿಶೀಲಿಸಿದಾದ ಇಬ್ಬರು ಬಂದು ಹೋಗಿರುವುದನ್ನು ಮೇಲೆ ಪೆÇಲೀಸರು ಪತ್ತೆಹಚ್ಚಿದ್ದು, ಅವರ ಮನೆಗೆ ತೆರಳಿದಾಗ ಬಾಲಕಿಯ ಗುರುತು ಸಿಕ್ಕಿದೆ. ಮೊದಲು ಯುವತಿ ಒಪ್ಪಿಕೊಳ್ಳಲಿಲ್ಲ. ಆದರೆ, ಕೊನೆಗೂ ವಿಚಾರಿಸಿದಾಗ ನಿಜ ಸಂಗತಿಯನ್ನು ಹೇಳಿದ್ದು, ಇದೀಗ ಇಬ್ಬರ ಮೇಲೂ ಪ್ರಕರಣ ದಾಖಲಿಸಲಾಗಿದೆ.