ಹೊನ್ನಾವರ : ತಾಲೂಕಿನ ಟೊಂಕ ಮೀನುಗಾರಿಕಾ ಬಂದರಿನಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದಿರುವ ಆರೋಪ ಕೇಳಿಬಂದಿತ್ತು ಅದಕ್ಕೆ ಸಿಪಿಐ ಶ್ರೀಧರ್ ಎಸ್.ಆರ್. ತಕ್ಷಣ ಸ್ಪಂದಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಂದರಿನಲ್ಲಿ ಲೈಟ್ ಇಲ್ಲದಿರುವುದರಿಂದ ಮೀನುಗಾರಿಕಾ ಕಾರ್ಮಿಕರು ಯಾರು ಕಳ್ಳರು ಯಾರು ಎನ್ನುವುದು ತಿಳಿಯಲು ಕಷ್ಟವಾಗಿತ್ತು. ಇನ್ನೊಂದೆಡೆ ಸುರಕ್ಷತೆಗೆ ಒಂದು ಸಿಸಿಟಿವಿ ಕೂಡ ಇಲ್ಲದೆ ಇರುವುದು ಕಳ್ಳರ ಹೂವಿನ ದಾರಿಯಾದಂತಿತ್ತು. ಮೀನುಗಾರ ಮುಖಂಡರು ಹೊನ್ನಾವರ ಠಾಣೆಯ ಸಿಪಿಐ ಶ್ರೀಧರ್ ಎಸ್.ಆರ್. ಬಳಿ ಮೀನುಗಾರಿಕಾ ಬಂದರಿನಲ್ಲಿ ಕಳ್ಳತನ ಆಗುವ ಜಾಗದಲ್ಲಿ ಲೈಟ್ ವ್ಯವಸ್ಥೆ ಸರಿ ಇಲ್ಲದಿರುವುದು ಹಾಗೂ ಸಿಸಿ ಕ್ಯಾಮೆರಾ ಇಲ್ಲದಿರುವುದು ಕಳ್ಳತನಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಹಾಗೂ ಲೈಟ್ ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಲು ವಿನಂತಿಸಿದ್ದಾರೆ.
ತಕ್ಷಣ ಸಿಪಿಐ ಶ್ರೀಧರ್ ಎಸ್ ಆರ್ ಅವರು ಮೀನುಗಾರಿಕಾ ಇನ್ಸೆಕ್ಟರ್ ನಾಗರಾಜ್ ಚಳ್ಳಜ್ಜಿಮನೆ ಇವರಿಗೆ ಫೋನ್ ಮುಖಾಂತರ ವಿಷಯ ತಿಳಿಸಿ ಲೈಟ್ ವ್ಯವಸ್ಥೆ ಮಾಡಿದ್ದಾರೆ. ಹಾಗೂ 15 ದಿನದೊಳಗೆ ಸಿಸಿ ಕ್ಯಾಮೆರಾದ ಅಳವಡಿಕೆ ಆಗಲಿದೆ ಎಂದು ಮೀನುಗಾರ ಮುಖಂಡರಿಗೆ ಆಶ್ವಾಸನೆ ನೀಡಿದ್ದಾರೆ.