ಮುಂಡಗೋಡ: ಪಟ್ಟಣದ ಅಮ್ಮಾಜಿ ಕೆರೆಯಲ್ಲಿ ಕಾರೊಂದು ಮುಳುಗಿ, ಕಾರಿನಲ್ಲಿದ್ದ ಇಬ್ಬರೂ ಮೃತಪಟ್ಟ ಘಟನೆ ಸೋಮವಾರ ನಸುಕಿನಲ್ಲಿ ಜರುಗಿದೆ. ಇವರೆಲ್ಲರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು ಎನ್ನಲಾಗಿದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೊರಟವರೇ, ಬಾರದ ಲೋಕಕ್ಕೆ ತೆರಳಿದ ಘಟನೆ ಮನೆಯವರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಘಟನೆಯ ಸ್ಥಳದಲ್ಲಿಯೂ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

RELATED ARTICLES  ಭಾಸ್ಕರ ಗಾಂವ್ಕರ ರವರಿಗೆ ಸನ್ಮಾನ ಕಾರ್ಯಕ್ರಮ

ಘಟನೆಯಲ್ಲಿ ಮೃತಪಟ್ಟವರನ್ನು ರಾಜು ವರ್ಗೀಸ್ ಹಾಗೂ ಬ್ಲೆಸ್ಸಿ ಎಂದು ಗುರುತಿಸಲಾಗಿದೆ. ಮೂಲತಃ ಅರಿಶಿಣಗೇರಿಯವರಾದ ಇಬ್ಬರೂ, ಬೆಂಗಳೂರಿನಲ್ಲಿ ನೆಲೆಸಿದ್ದರು. ಕರವಳ್ಳಿಯಲ್ಲಿ ಸಂಬಂಧಿಕರೊಬ್ಬರು ತೀರಿಕೊಂಡಿದ್ದರಿಂದ ಅವರ ಅಂತ್ಯಕ್ರಿಯೆ ಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಬರುತ್ತಿರುವಾಗ, ಅಮ್ಮಾಜಿ ಕೆರೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ನೀರಿನಲ್ಲಿ ಮುಳುಗಿದೆ. ಇಬ್ಬರೂ ಸಾವನ್ನಪ್ಪಿದ್ದಾರೆ. ಸಿಪಿಐ ಸಿದ್ಧಪ್ಪ ಸಿಮಾನಿ, ಪಿಎಸ್‍ಐ ಬಸವರಾಜ ಮಬನೂರ, ಪಿಎಸ್‍ಐ ಎನ್.ಡಿ.ಜಕ್ಕಣ್ಣವರ್, ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಹಾಗೂ ಕಾರು ಹೊರತೆಗೆದರು.

RELATED ARTICLES  ಕುಮಟಾ ಕಾಗಲ ಮೂಲದಅಮೇರಿಕಾ ನಿವಾಸಿ ಡಾ.ನಾಗೇಶ ರೇವಣಕರ್ ನಿಧನ.