ಸಿದ್ದಾಪುರ: ಕ್ಷುಲ್ಲಕ ಕಾರಣಕ್ಕೆ ಪಟ್ಟಣದಲ್ಲಿ ಯುವಕರ ನಡುವೆ ಗಲಾಟೆ ನಡೆದಿದ್ದು, ಅದು ನಂತರದಲ್ಲಿ ಹಲ್ಲೆಯಾಗಿ ಪರಿವರ್ತಿತವಾದಂತಾಗಿ, ಜಾತಿನಿಂದನೆ ಹಲ್ಲೆ ಮತ್ತು ದರೋಡೆ ಹಾಗೂ ಜೀವ ಬೆದರಿಕೆ ಘಟನೆಗೆ ಸಂಬಂಧಿಸಿದಂತೆ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರುಗಳು ದಾಖಲಾಗಿದೆ.

ನ. 13ರಂದು ಅನಿಲ್ ದುರ್ಗಪ್ಪ ಭೋವಿ ವಡ್ಡರ್ ಅಂಬೇಡ್ಕರ್ ಕಾಲೋನಿ ರವೀಂದ್ರ ನಗರ ಸಿದ್ದಾಪುರ ಆತನ ಸ್ನೇಹಿತನಾದ ಜೋಸೆಫ್ ಡಿಕೋಸ್ಟಾ ರವೀಂದ್ರ ನಗರ ಸಿದ್ದಾಪುರ ಇವರು ಪಟ್ಟಣಕ್ಕೆ ಬಂದು ತಿಂಡಿ ತಿಂದು ವಾಪಸ್ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬಸ್ ಸ್ಟಾಂಡ್ ಸರ್ಕಲ್ ನಲ್ಲಿ ಹಿಂದಿನಿಂದ ನ್ಯಾನೋ ಕಾರಿನಲ್ಲಿ ಬಂದಿದ್ದಾರೆ. ನಂತರ ಬ್ಯಾಂಕ್ ಆಫ್ ಬರೋಡಾದ ಹತ್ತಿರ ತಮ್ಮ ಕಾರಿಗೆ ಪ್ರಶಾಂತ್ ನಾಯ್ಕ್ ಹೊಸೂರ್, ದೇವೇಂದ್ರ ನಾಯ್ಕ್ ಹೊಸೂರ್, ಹರೀಶ್ ಗೌಡರ್ ಹರಳಿಕೊಪ್ಪ, ಇವರು ಅಡ್ಡ ಹಾಕಿ ಅವಾಚ್ಯ ಶಬ್ದದಿಂದ ಬೈದು ಜೋಸೆಫ್ ನನ್ನು ದೂಡಿ ಹಾಕಿ ತನ್ನನ್ನು ಬಲವಂತವಾಗಿ ಕಾರಿನಿಂದ ಕೆಳಗಿಳಿಸಿ ಕೈಯಿಂದ ಬೆನ್ನ ಮೇಲೆ ಗುದ್ಧಿ ಹಲ್ಲೆ ನಡೆಸಿದ್ದಾರೆ. ಜಾತಿನಿಂದನೆ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸುತ್ತಿರುವ ಸಂದರ್ಭದಲ್ಲಿ ಬಂದು ಹಲ್ಲೆ ಮಾಡಿದ ಮಂಜುನಾಥ್ ನಾಯ್ಕ್ ಹೊಸೂರ್ ನಾಲ್ವರ ಮೇಲೆ ದೂರು ನೀಡಿದ್ದಾರೆ.

RELATED ARTICLES  ಹೊನ್ನಾವರ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಶಿವರಾಜ ಮೇಸ್ತಾ ಆಯ್ಕೆ

ಘಟನೆಗೆ ಸಂಬಂಧಪಟ್ಟಂತೆ ಹರೀಶ್ ಗೌಡರ್ ಹರಳಿಕೊಪ್ಪ ಪ್ರತಿ ದೂರನ್ನು ನೀಡಿದ್ದು ತಾನು ತನ್ನ ಸ್ನೇಹಿತರಾದ ದೇವೇಂದ್ರ ಮತ್ತು ಪ್ರಶಾಂತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಟ್ಟಣದ ಬ್ಯಾಂಕ್ ಆಫ್ ಬರೋಡ ಎದುರು ತಮ್ಮ ಕಾರನ್ನು ಅನಿಲ್ ವಡ್ಡರ ಜೋಸೆಫ್ ಅಡ್ಡಹಾಕಿ ನನ್ನ ಕೊರಳಿನಲ್ಲಿದ್ದ ಚಿನ್ನದ ಚೈನ್ ಕಿತ್ತು ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಪ್ರತಿ ದೂರು ನೀಡಿದ್ದಾರೆ. ಪ್ರಕರಣವನ್ನ ದಾಖಲಿಸಿಕೊಂಡ ಪೆÇಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

RELATED ARTICLES  ಸುಮನಶ್ರೀ ಪ್ರಶಸ್ತಿಗೆ ನೀಲಾವತಿ ಗೋವಿಂದ ಅಂಬಿಗ ಅವರ ಆಯ್ಕೆ