ಕುಮಟಾ : ತಾಲೂಕಿನ ಪಟ್ಟಣದ ಗುಡಾಳದ ರೈಲ್ವೆ ಟ್ರ್ಯಾಕ್ ಬಳಿ ವ್ಯಕ್ತಿಯೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ. ವ್ಯಕ್ತಿ ಯಾವುದೋ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ? ಅಥವಾ ಯಾವ ರೀತಿಯಲ್ಲಿ ಈ ಘಟನೆ ನಡೆದಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ರೈಲು ಬಡಿದ ರಭಸಕ್ಕೆ ದೇಹ ಛಿದ್ರಗೊಂಡಿದೆ ಎನ್ನಲಾಗಿದೆ. ಘಟನೆಯು ಸುತ್ತಲ ಜನರನ್ನು ಬೆಚ್ಚಿ ಬೀಳಿಸಿದೆ ಎನ್ನಲಾಗಿದೆ.

RELATED ARTICLES  ಪುರಸ್ಕಾರಗಳು ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆ - ನಾಗರಾಜ ನಾಯಕ ತೊರ್ಕೆ .

ಮೂರೂರು ಅಳವಳ್ಳಿಯ ನಿವಾಸಿ ಶ್ರೀಕಾಂತ ವೆಂಕಟರಮಣ ಭಟ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತನಿಗೆ 52 ವರ್ಷ ವಯಸ್ಸೆಂದು ಗುರುತಿಸಲಾಗಿದೆ. ಈತನು ವಿಪರೀತ ಕುಡಿತದ ಚಟಕ್ಕೆ ಒಳಗಾಗಿದ್ದು, ಯಾವುದೋ ವಿಷಯವನ್ನು ಮನಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ಬಗ್ಗೆ ತನಿಖೆ ನಡೆಸುತ್ತಿದ್ದು ತನಿಖೆಯ ನಂತರದಲ್ಲಿ ಪೂರ್ಣ ಮಾಹಿತಿ ಹೊರಬರಲಿದೆ.

RELATED ARTICLES  ಕುಮಟಾ ಭಾರತೀಯ ಜನತಾಪಾರ್ಟಿ ವತಿಯಿಂದ ಮಹಾತ್ಮಾ ಗಾಂಧೀ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ.