ಭಟ್ಕಳ: ಉತ್ತರಕನ್ನಡದ ಹಲವೆಡೆ ಯುವತಿಯರು ಹಾಗೂ ಮಹಿಳೆಯರ ನಾಪತ್ತೆ ಪ್ರಕರಣ ಮೇಲಿಂದ ಮೇಲೆ ವರದಿಯಾಗುತ್ತಿದೆ ಭಟ್ಕಳದಲ್ಲಿ ಅಂತಹುದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯೋರ್ವಳು ಕಾಣೆಯಾಗಿರುವ ಕುರಿತು ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಮಹಿಳೆ ಚಿತ್ರಾಪುರದ ಹೊಸಗದ್ದೆ ನಿವಾಸಿ ಮಮತಾ ಜಗದೀಶ ನಾಯ್ಕ ಎಂದು ಪ್ರಕರಣದಲ್ಲಿ ಉಲ್ಲೇಖವಾಗಿದೆ.
ಈಕೆಗೆ ಕಳೆದ ಕೆಲವು ಸಮಯದ ಹಿಂದೆ ಫೇಸ್‌ಬುಕ್‌ನಲ್ಲಿ ಗೋಕಾಕ ತಾಲೂಕಿನ ಪೋಲಿಸ್ ಓರ್ವನ ಪರಿಚಯವಾಗಿದ್ದು ಕಳೆದ ಅ.೨೫ರಂದು ಆತ ಭಟ್ಕಳಕ್ಕೆ ಬಂದು ಈಕೆಯ ವಿಚಾರವಾಗಿ ಗಲಾಟೆ ಮಾಡಕೊಂಡು ಹೋಗಿದ್ದ ಎನ್ನಲಾಗಿದೆ. ಘಟನೆಯಲ್ಲಿ ಆತನನ್ನು ಕುಟುಂಬಸ್ಥರು ಹಾಗೂ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದರು ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಇದರ ನಂತರ ಬಂದು ತಾನು ಆಕೆಯ ತಂಟೆಗೆ ಬರುವುದಿಲ್ಲ ಎಂದು ಭರವಸೆ ಕೊಟ್ಟು ಹೋಗಿದ್ದವನು ಮತ್ತೆ ಪುನ: ನ.೧೧ಕ್ಕೆ ಬಂದು ಆಕೆಯೊಂದಿಗೆ ಮಾತನಾಡಿಕೊಂಡು ಹೋಗಿದ್ದು ಕೇವಲ ಅರ್ಧ ಗಂಟೆಯೊಳಗೆ ಆಕೆಯು ಯಾರಿಗೂ ಹೇಳದೇ ಮಾರುಕೇರಿಯ ಪಿರ್ಯಾದಿಯ ಮನೆಯಿಂದ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಸಹೋದರ ರಮೇಶ ನಾರಾಯಣ ನಾಯ್ಕ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಸಬ್ ಇನ್ಸಪೆಕ್ಟರ್ ಭರತ್ ತನಿಖೆ ನಡೆಸಿದ್ದಾರೆ. ತನಿಖೆ ನಂತರದಲ್ಲಿ ಘಟನೆಗೆ ಕಾರಣ ಏನು? ಹಾಗೂ ನಾಪತ್ತೆ ಆಗಿದ್ದು ಹೇಗೆ ಎಂಬ ಬಗ್ಗೆ ಪೂರ್ಣ ಮಾಹಿತಿ ಹೊರಬರಬೇಕಿದೆ.