ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಅಂತರ್ ಶಾಲಾ ಮಟ್ಟದ ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಲಾಗಿದೆ. ಕನ್ನಡ ನಾಡು ಕಲೆ, ಸಾಹಿತ್ಯ, ಸಂಸ್ಕೃತಿಯ ತವರೂರು. ಇಂತಹ ನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮ-ನಿಮ್ಮೆಲ್ಲರದ್ದಾಗಿದೆ. ಆ ನಿಟ್ಟಿನಲ್ಲಿ ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಅರಿವು ಮೂಡಿಸುವ ಸಲುವಾಗಿ ಈ ಕೆಳಗಿನ ಸ್ಫರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಗಳು:
• ಸ್ವರಚಿತ ಕವನ ವಾಚನ
• ಜಾನಪದ ಗೀತೆ ಸ್ಫರ್ಧೆ
• ವಿಚಾರ ಗೋಷ್ಠಿ
• ಚದುರಂಗ ಸ್ಫರ್ಧೆ
ಸ್ಪರ್ಧೆಗಳ ನಿಯಮಗಳು.
• ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆಯುತ್ತದೆ.
• ಮಕ್ಕಳು ವಾಚಿಸುವ ಕವನವು ಸ್ವರಚಿತವಾಗಿರಬೇಕು ಮತ್ತು ಸೂಕ್ತವಾದ ಸ್ವರಭಾರದ ಮೂಲಕ ವಾಚನ ಮಾಡಬೇಕು.
• ಜನಪದ ಗೀತೆ ಸ್ಫರ್ಧೆಯಲ್ಲಿ ಕನಿಷ್ಠ ಇಬ್ಬರು ಹಾಗು ಗರಿಷ್ಠ ಐದು ವಿದ್ಯಾರ್ಥಿಗಳಿರಬೇಕು. ಸಂಗೀತ ಪರಿಕರಗಳನ್ನು ತಾವೇ ತರತಕ್ಕದ್ದು. ವಿದ್ಯುನ್ಮಾನ ಪರಿಕರಗಳನ್ನು ಬಳಸುವಂತಿಲ್ಲ.
ಸ್ಪರ್ಧೆಗಳಲ್ಲಿ ಒಂದು ಶಾಲೆಯಿಂದ ಒಂದು ತಂಡಕ್ಕೆ ಮಾತ್ರ ಅವಕಾಶವಿರುತ್ತದೆ.
• ವಿಚಾರಗೋಷ್ಟಿಯಲ್ಲಿ ಭಾಗವಹಿಸುವವರು ಯಾವುದಾದರು ಒಂದು ವಿಷಯಕ್ಕೆ ಸಂಬಂಧಿಸಿದಂತೆ ಪರ ಅಥವಾ ವಿರೋಧವಾಗಿ ಮಾತನಾಡಬಹುದು.(ಕಾಲಮಿತಿ 5 ರಿಂದ 8 ನಿಮಿಷ ಮಾತ್ರ)
• ಶಾಲೆಯಿಂದ ಪ್ರತಿವಿಭಾಗಗಳಿಗೂ ಒಬ್ಬರು ವಿದ್ಯಾರ್ಥಿಗಳು ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಚೆಸ್ ಪಂದ್ಯಾಗಳು ಲೀಗ್ ಮಾದರಿಯಲ್ಲಿ ನಡೆಯುತ್ತದೆ ಹಾಗು ಪಂದ್ಯಗಳಿಗೆ ಕಾಲಮಿತಿಯಿರುತ್ತದೆ .
• ಒಬ್ಬ ವಿದ್ಯಾರ್ಥಿ ಯಾವುದಾದರು ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ.
• ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ವಿಚಾರಗೋಷ್ಟಿಯಲ್ಲಿ ಮಾತನಾಡಬಹುದಾದ ವಿಷಯಗಳು:
- ಕೋವಿಡ್ ನಿಂದಾಗಿ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಆರ್ಥಿಕ ಏರಿಳಿತಗಳು.
- ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಒಳಿತು ಕೆಡಕುಗಳು
- ಆನ್ ಲೈನ್ ಶಿಕ್ಷಣದ ಒಳಿತು ಅಥವಾ ಕೆಡಕುಗಳು
- ಜಾಗತಿಕ ತಾಪಮಾನ ಏರಿಕೆ
- ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸುವಲ್ಲಿ ನನ್ನ ಪಾತ್ರ
- ಅಭಿವೃದ್ಧಿ ಮನುಕುಲಕ್ಕೆ ಪೂರಕವೇ ಅಥವಾ ಮಾರಕವೇ
ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು ದಿನಾಂಕ 17-11-2021ರ ಒಳಗೆ ಶ್ರೀಧರ್ ಹೆಚ್. ಆರ್ – 8277589600, ಬಾಲಕೃಷ್ಣ ನಾಯಕ – 8884657968 ಮತ್ತು ಪೂಜಾ ಭಟ್ – 7019192352 ಇವರಿಗೆ ಕರೆ ಮಾಡಿ