ಶಿವಮೊಗ್ಗ: ಶಾಂತಿ ಸೌಹಾರ್ದಕ್ಕೆ ಹೆಸರಾದ ಶಿವಮೊಗ್ಗ ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯ ಕದಡುವ ಭಾರತೀಯ ಗೋವುಗಳನ್ನು ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿರುವುದು ಕಂಡುಬಂದಿದ್ದು. ಗೋವುಗಳಿಗೆ ಸಂಬಂಧಿಸಿದ ಕಾನೂನನ್ನು ಉಲ್ಲಂಘಿಸಿ ಅಕ್ರಮವಾಗಿ ಹಾಗೂ ಹಿಂಸಾತ್ಮಕವಾಗಿ ಸಾಗಾಟ ನಡೆಯುತ್ತಿದೆ. ಇದಕ್ಕೆ 09.09.2017 ರಂದು ಶಿರಾಳಕೊಪ್ಪದ ಘಟನೆಯೇ ಸಾಕ್ಷಿಯಾಗಿದೆ. ಗೋ ಸಾಗಾಟ ಮಾಡುತ್ತಿರುವವರನ್ನು ಪ್ರಶ್ನಿಸಿದ್ದಕ್ಕೆ ಗೋ ರಕ್ಷಕರನ್ನು ಥಳಿಸಲಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಅದರಿಂದಾಗಿ ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗೋವುಗಳ ಅಕ್ರಮ ಸಾಗಾಟ ತಡೆಯುವಂತೆ ಶಿವಮೊಗ್ಗ ಭಾರತೀಯ ಗೋ ಪರಿವಾರ   ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ ಮನವಿ ಸಲ್ಲಿಸಲಾಯಿತು.

RELATED ARTICLES  ವಿಧಾನಪರಿಷತ್ ಉಪಸಭಾಪತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಜಿಲ್ಲೆಯಾದ್ಯಂತ ಕಸಾಯಿಕಾನೆ ನಿಯಂತ್ರಿಸಿ, ಅಕ್ರಮ ಗೋ ಸಾಗಾಟ ಮಾಡುವವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲು ಶಿವಮೊಗ್ಗ ಭಾರತೀಯ ಗೋ ಪರಿವಾರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.

RELATED ARTICLES  ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು? ಕಾದು ಕುಳಿತ ಜನತೆ!

ಈ ಸಂದರ್ಭದಲ್ಲಿ ಗೋ ಪರಿವಾರದ ಪದಾಧಿಕಾರಿಗಳು ಹಾಗೂ ಗೋ ಪ್ರೇಮಿಗಳು ಹಾಜರಿದ್ದರು.