ಅಂಕೋಲಾ : ಉತ್ತರ ಕನ್ನಡದಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ಇಲಾಖೆ ಬಿಗಿ ಕ್ರಮ ಕೈಗೊಂಡಿದ್ದು, ಅನೇಕ ಕಡೆಗಳಲ್ಲಿ ಅಕ್ರಮ ಮರಳು ಸಾಗಾಟ ಪ್ರಕರಣವನ್ನು ತಡೆಯಲಾಗುತ್ತಿದೆ. ಅದಲ್ಲದೆ‌ ಅಕ್ರಮ ಮರಳುಗಾರಿಕೆ ಹಾಗೂ ಸಾಗಾಟ ಪ್ರಕರಣ ಕಡಿಮೆಯಾಗಿದೆ. ಆದರೂ ಅಂತಹ ಅಕ್ರಮ ಕೆಲಸದ ಪ್ರಯತ್ನ ಮುಂದುವರೆಯುತ್ತಿದೆ ಎಂದೇ ಹೇಳಬಹುದು. ಅದಕ್ಕೆ‌ ಸಾಕ್ಷಿ ಎಂಬಂತೆ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳು ತುಂಬಿ ಸಾಗಾಟ ಮಾಡುತ್ತಿದ್ದ 4 ವಾಹನಗಳನ್ನು ಮಾಲು ಸಮೇತ ವಶಕ್ಕೆ ಪಡೆದಿರುವ ಅಂಕೋಲಾ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

RELATED ARTICLES  ಉತ್ತರಕನ್ನಡದಲ್ಲಿ ಇಳಿಮುಖವಾಯ್ತು ಕೊರೋನಾ ಕೇಸ್

ತಾಲೂಕಿನ ಹಿಲ್ಲೂರ – ಹೊಸಕಂಬಿ ಮತ್ತಿತರೆಡೆ ಕೆಲ ವಾಹನಗಳಲ್ಲಿ ಅಕ್ರಮವಾಗಿ ರೇತಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ, ಸಿ.ಪಿ.ಐ ಸಂತೋಷ ಶೆಟ್ಟಿ ಮಾರ್ಗದರ್ಶನದಲ್ಲಿ ಸೋಮವಾರ ದಾಳಿ ನಡೆಸಿದ ಪಿ.ಎಸ್.ಐ ಪ್ರವೀಣಕುಮಾರ ನೇತೃತ್ವದ ತಂಡ, ಅಕ್ರಮವಾಗಿ ರೇತಿ ಸಾಗಿಸುತ್ತಿದ್ದ ಎರಡು ಟಿಪ್ಟರ್ ಲಾರಿಗಳು , ಎರಡು ಲಘು ವಾಹನಗಳು ಸೇರಿ ಒಟ್ಟೂ 4 ವಾಹನಗಳನ್ನು ವಶಪಡಿಸಿಕೊಂಡು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಪೊಲೀಸ್ ದಾಳಿಯ ವೇಳೆ ಮಾಲು ಸಮೇತ ವಶಪಡಿಸಿಕೊಂಡ ವಾಹನಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಈ ಪ್ರಕರಣದ ಕುರಿತಂತೆ ದಂಡ ವಸೂಲಿ ಮತ್ತಿತರ ಇಲಾಖೆ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

RELATED ARTICLES  ಅಮಾಯಕ ಜೀವಗಳ ಜೊತೆ ಚೆಲ್ಲಾಟ ಆಡುತ್ತಿರುವ ಅಧಿಕಾರಿಗಳು: ತೊಪ್ಪಲಕೇರಿ ಜನರ ಆಕ್ರಂದನ ಕೇಳಿಸಿಕೊಳ್ಳದ ಜಿಲ್ಲಾಡಳಿತ

ಕಾರ್ಯಾಚರಣೆಯಲ್ಲಿ ಪ್ರೊಬೆಶನರಿ ಪಿ.ಎಸ್.ಐ ಮುಶಾಹಿದ ಅಹಮದ್ ಸಿಬ್ಬಂದಿಗಳಾದ ಆಸಿಫ ಕುಂಕೂರ, ಮಂಜುನಾಥ ಲಕ್ಮಾಪುರ, ಶ್ರೀಕಾಂತ ಕಟಬರ, ಮತ್ತು ಭಗವಾನ ಗಾಂವಕರ, ಚಾಲಕ ಜಗದೀಶ ನಾಯ್ಕ ಪಾಲ್ಗೊಂಡಿದ್ದರು.