ಭಟ್ಕಳ: ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ಬೆಲೆಯ ಆಭರಣ ಕಳ್ಳತನ ಪ್ರಕರಣ ತಾಲೂಕಿನ ರಂಗಿನಕಟ್ಟೆ ರೈಸ್ ಮಿಲ್ ಹಿಂಬಾಗದ ಸಲ್ಮಾನ ಬಾದನಲ್ಲಿ ನಡೆದಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಠಾಣೆಯ ಪೊಲೀಸರು ಕಳ್ಳತನವಾದ ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ . ಬಂಧಿತ ಆರೋಪಿ ಚೌಥನಿ ಮೆನ್ ರೋಡ್ ನಿವಾಸಿ ಕೆ.ಪಿ ಮುಸ್ತಾಪ ಎಂದು ತಿಳಿದು ಬಂದಿದೆ.

ಶುಕ್ರವಾರ ರಾತ್ರಿ ಸಮನ್ರಿ ಫಜಲೂರ್ ರೆಹಮಾನ್ ಎನ್ನುವವರ ಮನೆಯ ಬಾಗಿಲನ್ನು ಮುರಿದು ಮನೆಯಲ್ಲಿರುವ ಕಪಾಟಿನ ಬಾಗಿಲನ್ನು ತೆರೆದು ಬಂಗಾರದ 2 ಉಂಗುರು, ಬ್ರಾಸಲೇಟ್ 1, ಕಿವಿ ಒಲೆ ಸೇರಿ ಸುಮಾರು 47 ಗ್ರಾಂ ತೂಕದ 1,45,000 ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಪರರಿಯಾಗಿದ್ದನು. ಈ ಕುರಿತು ಮನೆಯ ಮಾಲೀಕರು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು .

RELATED ARTICLES  ಶ್ರಾವಣಮಾಸದಲ್ಲಿ ಧಾರೇಶ್ವರದ ಶ್ರೀಧಾರಾನಾಥ ದೇವಸ್ಥಾನದಲ್ಲಿ ಈ ನಿಯಮ

ಕಳ್ಳತನವಾದ ಕೆಲವೇ ಗಂಟೆಯಲ್ಲಿ ಕಳ್ಳನನ್ನು ಹೆಡೆ ಮುರಿಕಟ್ಟಿದ ನಗರ ಠಾಣೆಯ ಪೊಲೀಸರು
ಶುಕ್ರವಾರ ರಾತ್ರಿಯಾಗಿರುವ ಕಳ್ಳತದ ಪ್ರಕರಣ ದಾಖಲಿಸಿಕೊಂಡ ಭಟ್ಕಳ ನಗರ ಠಾಣೆಯ ಪೊಲೀಸರು ಕಳ್ಳನ ಜಾಡು ಬೆನ್ನಟ್ಟಿ ಒಂದೇ ದಿನದಲ್ಲಿ ಕಳ್ಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಟ್ಕಳ ವೃತ್ತ ನಿರೀಕ್ಷಕರಾದ ದಿವಾಕರ ಪಿ.ಎಮ್. ಭಟ್ಕಳ ಶಹರ ಪೊಲೀಸ್ ಠಾಣೆಯ ಪಿ.ಎಸ್.ಐ ಗಳಾದ ಸುಮ ಬಿ, ಮತ್ತು ಹೆಚ್.ಬಿ. ಕುಡಗುಂಟಿ ಹಾಗೂ ಯಲ್ಲಪ್ಪ ಮಾದರ ಸಿಬ್ಬಂದಿಗಳಾದ ಎ. ಎಸ್.ಐ ಗೋಪಾಲ ನಾಯ್ಕ ಮಹಿಳಾ ಎ.ಎಸ್.ಐ ದೀಪಾ ನಾಯಕ, ದಿನೇಶ ನಾಯಕ, ಮದಾರಸಾಬ್ ಚಿಕ್ಕೇರಿ, ಈರಣ್ಣಾ, ಲೋಕಪ್ಪ ಕತ್ತಿ, ಸಿದ್ದಪ್ಪ ಕಾಂಬಳೆ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಹಳ್ಳೇರ ಸಮಾಜದ ವಿಠೋಬದೇವ ಯುವಕ ಸಂಘದಿಂದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ