ಶಿರಸಿ: ತಾಲೂಕಿನ ಚಿಪಗಿ ನಾರಾಯಣಗುರು ನಗರದಲ್ಲಿ ನೀರು ಕಾಯಿಸಲು ಹಾಕಿದ್ದ ವಿದ್ಯುತ್ ವಾಟರ್ ಹೀಟರ್ ಆಕಸ್ಮಿಕವಾಗಿ ತಗುಲಿ ವೃದ್ದೆಯೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಈಕೆಗೆ 71 ವರ್ಷ ವಯಸ್ಸಾಗಿತ್ತೆಂದು ತಿಳಿದುಬಂದಿದೆ.
ವಿದ್ಯುತ್ ವಾಟರ್ ಹೀಟರ್ ಆಕಸ್ಮಿಕವಾಗಿ ತಗುಲಿ ಮೃತಪಟ್ಟ ದುರ್ದೈವಿಯನ್ನು ಮೋಹಿನಿ ಬಾಬುರಾವ್ ಜೋಶಿ ಎಂದು ಗುರುತಿಸಲಾಗಿದೆ. ಈಕೆ ಮನೆಯಲ್ಲಿ ನೀರು ಕಾಯಿಸಲು ಹಾಕಿದ್ದ ವಿದ್ಯುತ್ ವಾಟರ್ ಹೀಟರನ್ನು ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕೈಗೆ ತಗುಲಿ, ದುರಂತ ಸಂಭವಿಸಿದೆ ಎನ್ನಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈಕೆ ಮನೆಕೆಲಸದಲ್ಲಿ ನಿರತಳಾಗಿದ್ದಳು ನಂತರ ವಿದ್ಯುತ್ ವಾಟರ್ ಹೀಟರ್ ತೆಗೆಯುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.