ಹೊನ್ನಾವರ: ಅಪಘಾತದಲ್ಲಿ ತನ್ನ ಮೂರು ಕಾಲುಗಳನ್ನು ಕಳೆದುಕೊಂಡ ಎತ್ತಿಗೆ ಗೋ ಪ್ರೇಮಿಗಳು ಪ್ರಥಮ ಚಿಕಿತ್ಸೆ ನೀಡಿ, ಗೋಶಾಲೆಗೆ ತಲುಪಿಸಿ, ಮಾನವೀಯತೆ ಮೆರೆದ ಘಟನೆ ತಾಲೂಕಿನ ಜಲವಳ್ಳಿ ಗ್ರಾಮದ ಕವಲಗೆರಿಯಲ್ಲಿ ನಡೆದಿದೆ.

ಎತ್ತಿನ 3 ಕಾಲುಗಳು ತುಂಡಾಗಿ ಬಿದ್ದ ವಿಷಯ ತಿಳಿದ ಗೋರಕ್ಷಣಾ ವೇದಿಕೆಯವರು ಗೋಪ್ರೇಮಿಗಳ ಜೊತೆಗೂಡಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬೆಂಗಳೂರು ಇವರನ್ನು ಸಂಪರ್ಕಿಸಿ, ಇವರ ಸಹಾಯ ಪಡೆದು ಮೂಡ್ಕಣಿ ಪಶು ಆಸ್ಪತ್ರೆಯ ವೈದ್ಯರಾದ ಪ್ರಕಾಶ್ ಹೆಗಡೆ ಹಾಗೂ ಇವರ ಸಹಾಯಕರಾದ ರೇಮಂದಿ ಸಹಕಾರದಿಂದ ಗೂಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.

RELATED ARTICLES  ಹಾವು ಕಚ್ಚಿ ಮಹಿಳೆ ಸಾವು: ಚಿಕಿತ್ಸೆ ಫಲ ನೀಡದೆ ಕೊನೆಯುಸಿರೆಳೆದ ಮಾದೇವಿ ಬಡಿಯಾ ಗೊಂಡ

ನಂತರ ಎತ್ತಿನ ಮಾಲೀಕರು ಯಾರು ಎಂದು ತಿಳಿಯದ ಕಾರಣ ಪಶು ಇಲಾಖೆಯ ಸಹಕಾರದಿಂದ ಗೇರುಸೊಪ್ಪ ಅಮೃತಧಾರಾ ಗೋ ಶಾಲೆಯವರೊಂದಿಗೆ ಮಾತನಾಡಿ, ಗೋ ರಕ್ಷಣಾ ವೇದಿಕೆ ಹೊನ್ನಾವರದ ಸದಸ್ಯರು ಜಲವಳ್ಳಿ ಗ್ರಾಮ ಪಂಚಾಯತ್‍ನಿಂದ ಒಪ್ಪಿಗೆ ಪತ್ರ ಪಡೆದು ಎತ್ತನ್ನು ಗೋ ಶಾಲೆಗೆ ಸಾಗಿಸಿದ್ದಾರೆ.

RELATED ARTICLES  ಉತ್ತರ ಕನ್ನಡದಲ್ಲಿ ಇಂದು ಒಟ್ಟು 37 ಕೊರೋನಾ ಕೇಸ್