ಕುಮಟಾ: ತಾಲ್ಲೂಕಿನ ದಯಾನಿಲಯ ವಿಶೇಷ ಚೇತನರ ಶಾಲೆಯ ವಿದ್ಯಾರ್ಥಿಗಳು ಮಂಗಳೂರಿನ ಮಂಗಳಾದೇವಿ ಕ್ರೀಡಾಂಗಣದಲ್ಲಿ ನ.14 ರಂದು ನಡೆದ ರಾಜ್ಯಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆ ಪ್ರಕ್ರಿಯೆಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಟೇಬಲ್ ಟೆನ್ನಿಸ್ ವಿಭಾಗದಲ್ಲಿ ವಿಗ್ನೇಶ್ ನಾಯ್ಕ್, ಶಶಾಂಕ್ ಅಂಬಿಗ ಆಯ್ಕೆಯಾಗಿದ್ದು, ಬಾಲಕೃಷ್ಣ ಕೋರ್ಗಾಂಕರ್ ತರಬೇತಿ ನೀಡಿದ್ದಾರೆ. ಪವರ್ ಲಿಫ್ಟಿಂಗ್ ವಿಭಾಗಕ್ಕೆ ನಂದನ್ ದೈವಜ್ಞ, ನೆಸ್ಟರ್ ರೋಡ್ರಿಗೊಸ್ ಆಯ್ಕೆಯಾಗಿದ್ದು, ಅನಿಲ್ ನಾಯ್ಕ್ ತರಬೇತಿ ನೀಡಿದ್ದಾರೆ. ಸೈಕಲಿಂಗ್ ವಿಭಾಗಕ್ಕೆ ಶ್ರೀವತ್ಸ ಭಟ್ ಆಯ್ಕೆಯಾಗಿದ್ದು, ಪುರುಷೋತ್ತಮ್ ಗೋವಾಂಕರ್ ಉತ್ತಮ ತರಬೇತಿ ನೀಡಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳು ಹಾಗೂ ತರಬೇತುದಾರರಿಗೆ ವಿಶೇಷ ಚೇತನರ ಈ ಸಾಧನೆಗೆ ಪ್ರೋತ್ಸಾಹಿಸಿ, ಅಗತ್ಯ ತರಬೇತಿ ನೀಡಿದ ದಯಾನಿಲಯ ಶಾಲಾ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕರು ಹಾಗೂ ಪಾಲಕರಿಗೆ ದಯಾನಿಲಯ ಸಂಸ್ಥೆ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಮಕ್ಕಳ ಭವಿಷ್ಯ ಉಜ್ವಲವಾಗಲಿ ಹಾಗೂ ಇನ್ನು ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಸಮಾಜದ ಎಲ್ಲ ಸ್ತರದ ಜನರು ಶುಭ ಹಾರೈಸುತ್ತಿದ್ದು ಸತ್ವಾಧಾರ ಬಳಗದವರೂ ಕೂಡ ಅವರಿಗೆ ಶುಭ ಹಾರೈಸಿದ್ದಾರೆ.