ಕಾರವಾರ : ಹವಾಮಾನ ಏರುಪೇರಿನಿಂದಾಗಿ ಸಮುದ್ರದಲ್ಲಿಯೂ ಅಲೆಗಳ ಅಬ್ಬರ ಜೋರಾಗಿದ್ದು, ಅರಬ್ಬಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮೀನುಗಾರಿಕೆಗೆ ತೆರಳಿದ್ದ ಉಡುಪಿ ಜಿಲ್ಲೆಯ ಮಲ್ಪೆಯ ಎರಡು ಬೋಟುಗಳು ಮುಳುಗಡೆಯಾದ ಘಟನೆ ಗೋವಾದ ಪಣಜಿ ಬಳಿಯ ಅರಬ್ಬಿ ಸಮುದ್ರದಲ್ಲಿ ನಡೆದಿದೆ.

RELATED ARTICLES  ಕಲ್ಮಟ್ಟೆ ರಸ್ತೆ ದುರಸ್ತಿಗೆ ಆಗ್ರಹ

ಮಲ್ಪೆಯಿಂದ ಗೋವಾದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೂರು ಬೋಟ್ ಗಳು ಅಲೆಗಳ ಅಬ್ಬರಕ್ಕೆ ಸಿಲುಕಿದ್ದು ಈ ವೇಳೆ ಇಂಜಿನ್ ಸಹ ಕೈ ಕೊಟ್ಟಿದೆ. ಮರದ ಬೋಟ್ ಆದ್ದರಿಂದ ಮಾತಾ ಜಟಗೇಶ್ವರ , ಪಲ್ಲಕ್ , ಹೆಸರಿನ ಬೋಟ್ ಮುಳುಗಡೆಯಾಗಿದ್ದು.

ಮುಳುಗಡೆಯಾದ ಎರಡು ಬೋಟ್ ನಲ್ಲಿ ಇದ್ದ ಏಳು ಜನರನ್ನು ಸ್ಥಳೀಯ ಮೀನುಗಾರರು ಹಾಗೂ ಗೋವಾದ ಕೋಸ್ಟ್ ಗಾರ್ಡ ಪೊಲೀಸರಿಂದ ರಕ್ಷಣೆ ಮಾಡಿ ವಾಸ್ಕೋ ಗೆ ಕರೆತಂದಿದ್ದಾರೆ‌ .ಕಡಲಪ್ರಿಯ ಹೆಸರಿನ ಬೋಟ್ ಸಹ ಮುಳುಗಡೆ ಹಂತದಲ್ಲಿದ್ದು ಇದನ್ನೂ ಸಹ ರಕ್ಷಣೆ ಮಾಡಲಾಗಿದೆ

RELATED ARTICLES  ಶ್ರೀ ಕ್ಷೇತ್ರ ಅಳ್ವೆಕೋಡಿಯಲ್ಲಿ ಸಾಹಿತಿ ಉಮೇಶ ಮುಂಡಳ್ಳಿಗೆ ಸನ್ಮಾನ