ಶಿರಸಿ : ಬಾಲಕಿಯನ್ನು ಅಪಹರಿಸಿ ಉತ್ತರಕನ್ನಡದ ಜನರು ಬೆಚ್ಚಿ ಬೀಳುವಂತೆ ಮಾಡಿದ್ದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಾಲಕಿಯನ್ನು ಮಹಾರಾಷ್ಟ್ರ ಕ್ಕೆ ಕರೆದೊಯ್ದಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬನವಾಸಿ ಪೊಲೀಸರು ಯಶ್ವಸಿಯಾಗಿದ್ದು, ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.
ತಾಲೂಕಿನ ಬನವಾಸಿಯ ಕುಪ್ಪಗಡ್ಡೆಯ ಸುನೀಲ ಸುರೇಶ್ ಬೋವಿವಡ್ಡರ, ಸರೋಜಾ ಸುರೇಸ್ ಬೋವಿವಡ್ಡರ ಹಾಗೂ ಅಕ್ಕಿ ಆಲೂರಿನ ಜೈರಾಮ ಹಾಲಪ್ಪ ಹುರಳಿ ಬಂಧಿತ ಆರೋಪಿಗಳು, ಬಾಲಕಿ ಕಿಡ್ನಾಪ್ ಆದ ಕುರಿತು ನ.11 ರಂದು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ವಿಶೇಷ ತಂಡ ರಚನೆ ಮಾಡಿದ್ದ ಪೊಲೀಸರು ನ.16 ರಂದು ಮಹಾರಾಷ್ಟç ರಾಜ್ಯದ ಮಿರಜ್ ನಲ್ಲಿ ಬಾಲಕಿಯನ್ನು ರಕ್ಷಸಿ, ಆರೋಪಿಗಳನ್ನು ಬಂಧಿಸಿದ್ದಾರೆ.