ಗೋಕರ್ಣ : ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ನಿರ್ವಾಹಕ ಹಾಗೂ ಪ್ರಯಾಣಿಕರು ಬಸ್ ನಲ್ಲಿ ಕುಳಿತಿದ್ದವರನ್ನು ಮಾತನಾಡಿಸಿದರೂ ಮಾತನಾಡುತ್ತಿದ್ದಾಗ ಗೊಂದಲಗೊಂಡ ಜನರು ಅವರನ್ನು ಗಮನಿಸಿದಾಗ ಸಾವನ್ನಪ್ಪಿರುವ ಬಗ್ಗೆ ತಿಳಿದುಕೊಂಡಿರುವ ಘಟನೆ ಗೋಕರ್ಣದಲ್ಲಿ ನಡೆದಿದೆ.
ಗೋಕರ್ಣದ ಬಸ್ ನಿಲ್ದಾಣದಲ್ಲಿ. ಇಲ್ಲಿನ ನಿಲ್ದಾಣದಿಂದ ಕುಮಟಾಕ್ಕೆ ತೆರಳವ ಬಸ್ ನಿಂತಿತ್ತು, ಆ ವೇಳೆ ನಿರ್ವಾಹಕ ಬಸ್ ಕುಳಿತಿದ್ದ ವ್ಯಕ್ತಿಯನ್ನು ವಿಚಾರಿಸಲು ಬಂದಾಗ ಮಾತನಾಡದಾಗ, ನಿಲ್ದಾಣದ ನಿಯಂತ್ರಕರಿಗೆ ತಿಳಿಸಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸ್ ಆಗಮಿಸಿದ್ದು, ಮೃತದೇಹವನ್ನು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ. ಹೆಸ್ಕಾಂ ಯೂನಿಫಾರ್ಮ್ ಧರಿಸಿದ್ದ ಶಿರಸಿಯವನೆಂದು ತಿಳಿದು ಬಂದಿದೆ. ಕಿಸೆಯಲ್ಲಿ ಅಂಕೋಲಾ ದಿಂದ ಕುಮಟಾಕ್ಕೆ ಬಂದ ಟಿಕೆಟ್ ದೊರೆತಿದ್ದು, ಇವರು ಗೋಕರ್ಣಕ್ಕೆ ಬಂದಿದ್ದವರು ಎನ್ನಲಾಗಿದೆ.