ಬೆಂಗಳೂರು: ಲಿಂಗಾಯತ ವೀರಶೈವ ಪ್ರತ್ಯೇಕ ಧರ್ಮ ವಿವಾದ ಸಂಬಂಧ ಸಿದ್ಧಗಂಗಾ ಶ್ರೀಗಳ ಹೆಸರನ್ನು ಮಧ್ಯೆ ಎಳೆದು ತಂದ ಎಂ ಬಿ ಪಾಟೀಲ್ ವಿರುದ್ಧ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಇಂದು ಕ್ಯಾಬಿನೆಟ್ ಹಾಲ್ ಗೆ ಪಾಟೀಲರು ಬಂದ ಕೂಡಲೇ ಸಿಟ್ಟಿಗೆದ್ದ ಸಿದ್ದರಾಮಯ್ಯ, ಏನಪ್ಪಾ ಇದೆಲ್ಲಾ ಸ್ವಾಮೀಜಿ ಹೆಸರು ಮಧ್ಯೆ ತಂದು ಯಾರೂ ಉತ್ತರ ಕೊಡದ ಹಾಗೆ ಮಾಡಿದ್ದಿಯಲ್ಲ ಎಂದು ರೇಗಿದರು ಎಂದು ಹೇಳಲಾಗಿದೆ.
ಯೋಚನೆ ಮಾಡಿ ಮಾತನಾಡೋಕೆ ಆಗಲ್ವಾ. ಬಾಯಿಗೆ ಬಂದ ಹಾಗೆ ಮಾತಾಡಿ ಮತ್ತೆ ಅದೇ ಸಮರ್ಥನೆ ಮಾಡೋದು ಸರ್ಕಾರಕ್ಕೆ ಅವಮಾನವಾಗಿದೆ ಎಂದು ಕೋಪಗೊಂಡರಲ್ಲದೆ ಲಿಂಗಾಯತ ಧರ್ಮ ವಿಚಾರದಲ್ಲಿ ಯಾಕೆ ಬಾಲಿಶವಾಗಿ ವರ್ತಿಸಿದ್ದು ಎಂದು ಖಾರವಾಗೇ ಸಿದ್ದರಾಮಯ್ಯ ಪ್ರಶ್ನಿಸಿದರು ಎನ್ನಲಾಗಿದೆ.
ಇದೇ ವೇಳೆ, ಈಶ್ವರ ಖಂಡ್ರೆ ಮತ್ತು ಶರಣು ಪ್ರಕಾಶ್ ಪಾಟೀಲ್ ಕಡೆ ಮುಖ ಮಾಡಿ, ನಿಮಗೂ ಗೊತ್ತಾಗಲ್ವಾ ಈ ಸಮಯದಲ್ಲಿ ಇದೆಲ್ಲಾ ಬೇಕಿತ್ತಾ ನಿಮಗೆಲ್ಲಾ. ಎಲೆಕ್ಸನ್ ಸಮಯದಲ್ಲಿ ಹೀಗೆಲ್ಲಾ ಮಾತನಾಡೋದಾ. ಇನ್ನಾದರೂ ಸ್ವಲ್ಪ ಯೋಚನೆ ಮಾಡಿ ಮಾತಾಡಿ ಎಂದು ಕಿಡಿಕಾರಿದರು.
ನಂತರ ಶ್ರೀಗಳ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಮಾತನಾಡಿದ ಸಿದ್ದರಾಮಯ್ಯ, ಅವರು ಮಾತನಾಡಿದಕ್ಕೆ ಏನಾದರೂ ಪ್ರೋಫ್ ಇಟ್ಕೋಬೇಕಿತ್ತು. ಅವರು ಪಾಪ ವಯಸ್ಸಾಗಿದೆ. ಅವರು ಏನು ಹೇಳಿದರೋ ನೀನೇನು ಕೇಳಿಸ್ಕೋಂಡಿ ದೇವರಿಗೇ ಗೊತ್ತು ಎಂದು ಅಸಮಧಾನ ವ್ಯಕ್ತಪಡಿಸಿದರು.