ಶಿರಸಿ: ಶಾಲೆಯ ಶೌಚಾಲಯದಲ್ಲಿ ನಾಗರ ಹಾವೊಂದು ಬಂದು ಸೇರಿದ್ದು, ಮಕ್ಕಳು ಹಾಗೂ ಶಿಕ್ಷಕರಲ್ಲಿ ಆತಂಕ ಉಂಟಾಗಿತ್ತು. ಆದರೆ ಶಿಕ್ಷಕರೊಬ್ಬರ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಶೌಚಾಲಯದಲ್ಲಿ ಅಡಗಿ ಕುಳಿತಿದ್ದ ನಾಗರಹಾವನ್ನು ಶಿಕ್ಷಕರು ಹಿಡಿದು ಕಾಡಿಗೆ ಬಿಟ್ಟ ನಂತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೆಮ್ಮದಿಯ ನಿಟ್ಟುಸಿರುಬಿಟ್ಟರು ಬಿಟ್ಟರು.
ಶಾಲೆಯ ಶೌಚಾಲಯದಲ್ಲಿದ್ದ ನಾಗರಹಾವನ್ನು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಕುರಬರ್ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಸಿದ್ದಾಪುರ ತಾಲೂಕಿನ ಕಾನಸೂರಿನ ಶ್ರೀ ಕಾಳಿಕಾ ಭವಾನಿ ಪ್ರೌಢಶಾಲೆಯ ಶೌಚಾಲಯದ ಒಳಗೆ ಹಾವೊಂದು ಬಂದ ಸುದ್ದಿ ತಿಳಿದ ತಕ್ಷಣ ಶಿಕ್ಷಕ ಪ್ರವೀಣ್ ಶೌಚಾಲಯದತ್ತ ಹೋಗಿ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಈ ಹಿಂದೆಯೂ ತರಗತಿಯೊಳಗೆ ಹಾವು ಬಂದಾಗ ಇವರು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದರು.