ಕಾರವಾರ: ಸದಾ ಒಂದಿಲ್ಲೊಂದು ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಹಾಗೂ ಚತುಷ್ಪತ ಕಾಮಗಾರಿಗಳು ಸುದ್ದಿಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಬಗ್ಗೆ ಜನರು ಆಗಾಗ ತೊಂದರೆ ಅನುಭವಿಸುತ್ತಿದ್ದು ಅಂತಹುದೇ ಪ್ರಕರಣವೊಂದು ಎಂದು ಮತ್ತೆ ಘಟಿಸಿದೆ.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಹಿನ್ನಲೆಯಲ್ಲಿ ಸ್ಥಳೀಯರಿಗೆ ಮಾಹಿತಿ ನೀಡದೇ ಕಲ್ಲುಬಂಡೆ ಸ್ಪೋಟಿಸಿದ ಪರಿಣಾಮ ಸ್ಪೋಟಗೊಂಡ ಕಲ್ಲುಗಳು ಮನೆಗಳ ಮೇಲೆ ಬಿದ್ದು ಕೆಲಕಾಲ ಜನತೆಯ ಕಂಗಾಲಾದ ಘಟನೆ ಕುಮಟಾ ತಾಲೂಕಿನ ತಂಡ್ರಕುಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ನಡೆದಿದೆ ಎಂದು ವರದಿಯಾಗಿದೆ.
ತಂಡ್ರಕುಳಿಯಲ್ಲಿ ಸ್ಪೋಟದಿಂದ ಮನೆಗಳ ಮೇಲೆ ಕಲ್ಲು ಬಿದ್ದಿದ್ದರಿಂದ ಸ್ಥಳೀಯರು ಗೊಂದಲಕ್ಕೆ ಒಳಗಾದರು ಪ್ರತಿ ಬಾರಿ ಒಂದಿಲ್ಲೊಂದು ಸಮಸ್ಯೆ ಆಗುತ್ತಿರುವ ನಿಟ್ಟಿನಲ್ಲಿ ಈ ಘಟನೆಯಿಂದಾಗಿ ಜನತೆ ಬೇಸರಗೊಂಡು, ರಾಷ್ಟ್ರೀಯ ಹೆದ್ದಾರಿ 66 ನ್ನು ತಡೆದು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಕುಮಟಾ ಶಾಸಕ ದಿನಕರ್ ಶಟ್ಟಿ ಆಗಮಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆದು ಗುತ್ತಿಗೆದಾರನನ್ನು ತರಾಟೆ ತೆಗೆದುಕೊಂಡರು. ಈ ಭಾಗದ ಜನರು ರಸ್ತೆ ಕಾಮಗಾರಿಯಿಂದಾಗಿ ಇಲ್ಲೊಂದು ಸಮಸ್ಯೆ ಅನುಭವಿಸುತ್ತಿದ್ದು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜನತೆ ಮನವಿ ಮಾಡಿದ್ದಾರೆ.