ಶಿರಸಿ : ಉತ್ತರ ಕನ್ನಡದಲ್ಲಿ ಯುವತಿಯರು ಹಾಗೂ ಮಹಿಳೆಯರ ನಾಪತ್ತೆ ಪ್ರಕರಣಗಳು ಮುಂದುವರೆದಿದ್ದು ಇಂದು ಸಹ ಅಂತಹುದೇ ಪ್ರಕರಣವೊಂದು ದಾಖಲಾಗುವ ಮೂಲಕ ನಾಪತ್ತೆ ಪ್ರಕರಣದ ಸರಣಿಯನ್ನು ಮುಂದುವರಿಸಿದೆ. ಗಂಡನ ಸಂಬಂಧಿಕರ ಮನೆಯಲ್ಲಿ ಉಳಿಯಲು ಬಂದಿದ್ದ ಮಹಿಳೆಯೋರ್ವರು ಶಿರಸಿಯಲ್ಲಿ ನಾಪತ್ತೆಯಾದ ಘಟನೆ ಇಂದು ವರದಿಯಾಗಿದೆ.

ಹಾವೇರಿ ಜಿಲ್ಲೆಯ ಸೌರಭ ತಾಲೂಕಿನ ಹತ್ತಿಮತ್ತೂರು ಗ್ರಾಮದಿಂದ ಶಿರಸಿಯ ದಾಸನಕೊಪ್ಪ ದಲ್ಲಿರುವ ಗಂಡನ ಸಂಬಂಧಿಕರೋರ್ವರ ಮನೆಯಲ್ಲಿ ಉಳಿಯಲು ಬಂದಿದ್ದ ಮಹಿಳೆಯೋರ್ವಳು ಮನೆಯಿಂದಲೇ ನಾಪತ್ತೆ ಆಗಿರುವ ಘಟನೆ ನಡೆದಿದೆ.

RELATED ARTICLES  ಉತ್ತರ ಕನ್ನಡ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆ ಸಂಪನ್ನ: ಬಂಡಾರಕರ್ ಸಂಸ್ಮರಣೆಯೊಂದಿಗೆ ಸಂಪನ್ನವಾದ "ಜ್ಞಾನಾಂಮೃತ"

ನಾಪತ್ತೆ ಆಗಿರುವ ಮಹಿಳೆ ಲಲಿತಾ ಮರಿಯಪ್ಪ ಎಂದು ಗುರುತಿಸಲಾಗಿದೆ. ಈಕೆ ದಾಸನಕೊಪ್ಪ ದಲ್ಲಿ ಇರುವ ತನ್ನ ಗಂಡನ ಮನೆಯಲ್ಲಿ ಉಳಿಯುವುದಕ್ಕೆ ಬಂದಿದ್ದಳು ಎಂದು
ಹೇಳಲಾಗುತ್ತಿತ್ತು. ಆದರೆ ಈಕೆ ಮನೆಯಲ್ಲಿ ಇದ್ದ ವೇಳೆ, ಯಾರಿಗೂ ಹೇಳದೆ – ಕೇಳದೆ ನಾಪತ್ತೆಯಾಗಿದ್ದಾಳೆ. ತನ್ನ ಪತ್ನಿಯನ್ನು ಹುಡುಕಿ ಕೊಡುವಂತೆ ಆಕೆಯ ಪತಿ ಬನವಾಸಿ ಪೊಲೀಸ್ ಠಾಣೆಗೆ ಪ್ರಕರಣವನ್ನು ದಾಖಲಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡ ಬನವಾಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ ತನಿಖೆಯ ನಂತರದಲ್ಲಿ ಯಾವ ಕಾರಣಕ್ಕಾಗಿ ಯುವತಿ ನಾಪತ್ತೆಯಾಗಿದ್ದಳು ಎನ್ನುವ ವಿವರಗಳು ತಿಳಿದುಬರಬೇಕಿದೆ.

RELATED ARTICLES  ಶಿಕ್ಷಕ, ಕಲಾವಿದ ಕೆರೆಮನೆ ರಾಮ ಹೆಗಡೆ ಇನ್ನಿಲ್ಲ….