ಸಿದ್ದಾಪುರ: ತಾಲೂಕಿನ ಕೊಂಡ್ಲಿ ಗ್ರಾಮದಲ್ಲಿ ಅತಿಕ್ರಮಣ ಜಮೀನಿಗಾಗಿ ಸಹೋದರರ ನಡುವೆ ಜಗಳವಾಗಿ, ಹಲ್ಲೆ ನಡೆದ ಮತ್ತು ಜೀವ ಬೆದರಿಕೆ ಹಾಕಿರುವ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಲಕ್ಷ್ಮಣ ನಾಯ್ಕ ಕೊಂಡ್ಲಿ ರವರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಸರ್ವೆ ನಂಬರ್ 308 “ಅ” ಇದರ ಬಗ್ಗೆ ಈಶ್ವರ ಈಶ್ವರ್ ಎನ್ನುವವರು ಬಳಕೆ ಮಾಡುತ್ತಿರುವ ಜಮೀನಿನಲ್ಲಿ ಆರೋಪಿತರು ಕೆಲವು ಜನರೊಂದಿಗೆ ಕತ್ತಿ ಕೊಡಲಿ ಬಡಿಗೆ ಮುಂತಾದ ಮಾರಕಾಸ್ತ್ರ ಗಳೊಂದಿಗೆ ಅಕ್ರಮವಾಗಿ ಪ್ರವೇಶಿಸಿ ಆ ಜಾಗದಲ್ಲಿ ಬೆಳೆದ ಬೆಲೆ ಬಾಳುವ 3-4 ವರ್ಷದ ಅಡಿಕೆ ತೆಂಗು ಮಾವು ಗಿಡಗಳನ್ನು ಕಿತ್ತು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಕುಟುಂಬದವರಿಗೆ ಅವಾಚ್ಯ ಶಬ್ದದಿಂದ ಬೈದು ಈಶ್ವರ ಹಾಗೂ ಆತನ ಮಗನಾದ ಬಾಲಚಂದ್ರ ನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಗೆ ಸಂಬoಧಿಸಿದoತೆ ಸೋಮಶೇಖರ ಲಕ್ಷ್ಮಣ ನಾಯ್ಕ, ವಾಸುದೇವ ಸೋಮಶೇಖರ ನಾಯ್ಕ ಹಾಗೂ ಕಾಳಿ ಪ್ರಸಾದ್ ಸೋಮಶೇಖರ ನಾಯ್ಕ ಕೊಂಡ್ಲಿ ರವರ ಮೇಲೆ ಸಿದ್ದಾಪುರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿರುತ್ತಾರೆ. ತನಿಖೆ ನಂತರದಲ್ಲಿ ಘಟನೆಯ ಪೂರ್ಣ ಮಾಹಿತಿ ತಿಳಿದು ಬರಬೇಕಿದೆ.