ಯಲ್ಲಾಪುರ: ಉತ್ತರಕನ್ನಡದಲ್ಲಿ ಜಾನುವಾರುಗಳ ಸಾಗಾಟ ಮತ್ತೆ ಮತ್ತೆ ಬೆಳಕಿಗೆ ಬರುತ್ತಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದರೂ ಸಹ ಅಕ್ರಮ ಜಾನುವಾರು ಸಾಗಾಟ ನಿರಂತರವಾಗಿ ನಡೆಯುತ್ತಿದೆ.ಅಂತಹುದೇ ಪ್ರಕರಣವೊಂದು ಮತ್ತೆ ಬೆಳಕಿಗೆ ಬಂದಿದೆ.
ಪಟ್ಟಣದ ರೋಜರಿ ಶಾಲೆ ಮುಂಭಾಗದ ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರ ನೋಂದಣಿಯ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಕೋಣಗಳು, 10 ಎಮ್ಮೆಗಳು ಹಾಗೂ 4 ಎಮ್ಮೆ ಕರುಗಳನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿ ವಾಹನ ವಶಕ್ಕೆ ಪಡೆಯಲಾಗಿದೆ.
ಮಹಾರಾಷ್ಟ್ರ ಮೂಲದ ಸಂತೋಷ ಶಿವಾಜಿ ಘುಮೆ, ಶಾಮ ಪ್ರಹ್ಲಾದ ಬೋಸ್ಥೆ ಹಾಗೂ ಕೇರಳ ಮೂಲದ ಜಿತ್ ನಾರಾಯಣ ಕುಟ್ಟಿ, ಶಶಿ ಅಯ್ಯಪ್ಪ ಕುಟ್ಟಿ ಬಂಧಿತ ಆರೋಪಿಗಳಾಗಿದ್ದಾರೆ. ಹಿಂಸಾತ್ಮಕ ರೂಪದಲ್ಲಿ ಬಲಿ ಕೊಡುವ ಉದ್ದೇಶದಿಂದ ಗುರುವಾರ ರಾತ್ರಿ ಹುಬ್ಬಳ್ಳಿ ಕಡೆಯಿಂದ ಲಾರಿಯಲ್ಲಿ ಅಂಕೋಲಾದ ಕಡೆಗೆ ಸಾಗಿಸುತ್ತಿದ್ದ ಸಮಯದಲ್ಲಿ ಅತಿ ಇಕ್ಕಟ್ಟಾಗಿ ಯಾವುದೇ ಪಾಸ್ ಇಲ್ಲದೇ ಅವುಗಳ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಪೊಲೀಸರು ತಂಡ ದಾಳಿ ಮಾಡಿ ವಾಹನವನ್ನು ಹಾಗೂ ಜಾನುವಾರು ಮತ್ತು ಮೇವು ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ.
ಜಾನುವಾರುಗಳಿಗೆ ನೀರನ್ನೂ ನೀಡದೇ ಮಲಗಲೂ ಸಹ ಸ್ಥಳವಿಲ್ಲದೇ ರಸಾತ್ಮಕವಾಗಿ ಅವುಗಳನ್ನು ಸಾಧಿಸಲಾಗುತ್ತಿದೆಯೆಂದು ತಿಳಿದುಬಂದಿದೆ.
Read More