ಮುಂಡಗೋಡ: ಉತ್ತರಕನ್ನಡದಲ್ಲಿ ಮಹಿಳೆಯರ ನಾಪತ್ತೆ ಪ್ರಕರಣ ಮತ್ತೆ ಮತ್ತೆ ಬೆಳಕಿಗೆ ಬರುತ್ತಿದೆ. ಪ್ರತಿನಿತ್ಯ ಒಂದಿಲ್ಲೊಂದು ಕಡೆಗಳಲ್ಲಿ ಮಹಿಳೆಯರು ಅಥವಾ ಬಾಲಕಿಯರ ನಾಪತ್ತೆ ಪ್ರಕರಣ ವರದಿಯಾಗುತ್ತಿದೆ. ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆಬಂದಿದೆ.
ತಾಲೂಕಿನ ಕಂದ ಲಗೇರಿ ಗ್ರಾಮದ ಮಹಿಳೆಯೋರ್ವಳು ಮನೆಯಲ್ಲಿ ಮಗು ಬಿಟ್ಟು ನಾಪತ್ತೆಯಾದ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಧುಶ್ರೀ ಚೋಳಪ್ಪನವರ್ ಕಾಣೆಯಾದ ಮಹಿಳೆಯಾಗಿದ್ದಾಳೆ.
ನ.15ರಂದು ರಾತ್ರಿ ಸಮಯದಲ್ಲಿ ತನ್ನ ಮಗುವನ್ನು ಮನೆಯಲ್ಲಿ ಬಿಟ್ಟು ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ನಾಪತ್ತೆಯಾಗಿದ್ದಾಳೆ. ಸಂಬಂಧಿಕರ ಮನೆಗಳಲ್ಲಿ ವಿಚಾರಿಸಲಾಗಿ ಈವರೆಗೂ ಮಹಿಳೆಯ ಇರುವಿಕೆಯ ಕುರಿತು ಪತ್ತೆಯಾಗಿಲ್ಲ. ನಾಪತ್ತೆಯಾದ ಮಧುಶ್ರೀಯನ್ನು ಹುಡುಕಿಕೊಡಿ ಎಂದು ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.