ಯಲ್ಲಾಪುರ : ಲೋಕೋಪಯೋಗಿ ಇಲಾಖೆಯ ಕಾವಲುಗಾರನೊಬ್ಬ ಕಚೇರಿಯಲ್ಲಿಯೇ ಕೊನೆಯುಸಿರಿರುವ ಘಟನೆ ವರದಿಯಾಗಿದೆ. ಪಟ್ಟಣದ ಐ.ಬಿ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಕಾವಲುಗಾರ ನೌಕರನೊಬ್ಬ ಪ್ರತಪಟ್ಟಿರುವ ಘಟನೆ ಇದಾಗಿದ್ದು, ಇಂದು ಈ ದುರ್ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಮೃತನು ಗುಲ್ಬರ್ಗದ ರಾಜಾಪೂರ ಇಟ್ಟಂಗಿ ಭಟ್ಟಿ ರೋಡ್ ನಿವಾಸಿಯಾಗಿದ್ದು ಹಾಲಿ ಯಲ್ಲಾಪುರದ ಐಬಿ ರಸ್ತೆಯಲ್ಲಿರುವ ಪಿ.ಡಬ್ಲೂಡಿ ಕ್ವಾಟ್ರಸ್ ನಲ್ಲಿ ವಾಸಿಸುತ್ತಿರುವ ರಾಜೇಂದ್ರ ಭೀಮರಾವ್ ಬಾಗೋಡಿ ಎಂದು ಗುರುತಿಸಲಾಗಿದೆ ಈತನಿಗೆ 32 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.
ಈತ ಕಳೆದ ಒಂದು ತಿಂಗಳಿನಿಂದ ಎದೆ ನೋವಿನಿಂದ ಬಳಲುತ್ತಿದ್ದವನು ಕಾವಲು ಕೆಲಸಕ್ಕಾಗಿ ಕಚೇರಿಗೆ ಹೋದವನು ಕಚೇರಿಯಲ್ಲಿ ಅಭಿಯಂತರರ ಛೇಂಬರ್ ನಲ್ಲಿಯೆ ಬಿದ್ದು ಮೃತ ಪಟ್ಟಿರುತ್ತಾನೆ ಎನ್ನಲಾಗಿದೆ. ಈ ಸಂಬಂಧ ಮೃತನ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ತರದ ಯಾಗದಿಂದ ಮೃತಪಟ್ಟಿರಬಹುದು ಎಂಬ ಮಾಹಿತಿ ಸ್ಥಳೀಯವಾಗಿ ಲಭ್ಯವಾಗಿದ್ದು ಸಂಪೂರ್ಣ ತನಿಖೆ ನಂತರದಲ್ಲಿ ಪೂರ್ಣ ಮಾಹಿತಿ ಹೊರಬರಬೇಕಿದೆ.