ಶಿರಸಿ : ಉತ್ತರಕನ್ನಡದಲ್ಲಿ ಮಹಿಳೆಯರ ನಾಪತ್ತೆ ಪ್ರಕರಣ ಮತ್ತೆ ಮತ್ತೆ ಬೆಳಕಿಗೆ ಬರುತ್ತಿದೆ. ಪ್ರತಿನಿತ್ಯ ಒಂದಿಲ್ಲೊಂದು ಕಡೆಗಳಲ್ಲಿ ಮಹಿಳೆಯರು ಅಥವಾ ಬಾಲಕಿಯರ ನಾಪತ್ತೆ ಪ್ರಕರಣ ವರದಿಯಾಗುತ್ತಿದೆ. ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆಬಂದಿದೆ.
ಅನಾರೋಗ್ಯ ಎಂದು ಆಸ್ಪತ್ರೆಗೆ ಆಗಮಿಸಿದ ವೇಳೆ ವಿವಾಹಿತ ಮಹಿಳೆಯೊಬ್ಬಳು ಇದ್ದಕ್ಕಿದ್ದಂತೆ ನಾಪತ್ತೆಯಾದ ಘಟನೆ ಶಿರಸಿಯಲ್ಲಿ ನಡೆದಿದೆ, 20 ವರ್ಷ ವಯೋಮಾನದ ಕಾವ್ಯಶ್ರೀ ವಿನಾಯಕ ಜೋಗಳೇಕರ್ ನಾಪತ್ತೆಯಾದ ಯುವತಿ ಎಂದು ವರದಿಯಾಗಿದೆ.
ಕಾವ್ಯಶ್ರೀ ತನ್ನ ಮಾವನ ಜೊತೆ ಅನಾರೋಗ್ಯದ ನಿಮಿತ್ತ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ್ದಳು. ಈ ವೇಳೆ ಮಾವನ ಹತ್ತಿರ ತರಕಾರಿ ತರುವಂತೆ ತಿಳಿಸಿ, ಮಾವ ತರಕಾರಿ ತರುವಷ್ಟರಲ್ಲಿ ಕಾವ್ಯಶ್ರೀ ನಾಪತ್ತೆಯಾಗಿದ್ದಾಳೆ. ಮನೆಗೂ ಬಾರದೆ, ನೆಂಟರ ಮನೆಗೂ ಹೋಗದೆ ಇರುವ ಕುರಿತು ಪ್ರಕರಣ ದಾಖಲಾಗಿದೆ.
ಈ ಕುರಿತು ಶಿರಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳೆ ಸುಮಾರು 5.2 ಇಂಚು ಎತ್ತರ ಮತ್ತು ಗೋಧಿ ಬಣ್ಣ , ಸಾಧಾರಣ ಮೈಕಟ್ಟು ಹೊಂದಿದ್ದಾಳೆ. ಕನ್ನಡ , ಇಂಗ್ಲೀಷ್ ಮಾತನಾಡುತ್ತಾರೆ, ಈಕೆಯ ಕುರಿತು ಮಾಹಿತಿ ಸಿಕ್ಕಿಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.