ಹೆಗಡೆಕಟ್ಟಾ ಸೊಸೈಟಿ ಜನರ ಆರೋಗ್ಯದತ್ತ ಕಾಳಜಿ ವಹಿಸಿದೆ, ತಾವು ಸ್ವತಃ ಈ ಭಾಗದಲ್ಲಿ ಕೆಲಸ ಮಾಡಿದ್ದು ಇವತ್ತಿನ ಆರೋಗ್ಯ ಶಿಬಿರದಲ್ಲಿ ಇಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯೆನಿಸಿದೆ ಎಂದು ಡಾ. ರಾಮಾ ಹೆಗಡೆ ಹೇಳಿದರು. ಅವರು ಹೆಗಡೆಕಟ್ಟಾ ಸೊಸೈಟಿ ಶತಮಾನ ಸಂಭ್ರಮ ನಿಮಿತ್ತ ಭಾನುವಾರ ನಡೆದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ವಿನಯ ಹೆಗಡೆ ಬಸವನಕಟ್ಟೆ ಮಾತನಾಡಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘ ಹಾಗೂ ನಮ್ಮ ಲಯನ್ಸ್ ಕ್ಲಬ್ ಹಿಂದೆಯೂ ಕೂಡ ಇಂತಹ ಶಿಬಿರಗಳನ್ನು ಆಯೋಜಿಸುತ್ತಿದ್ದು, ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಲಯನ್ಸ್ ಕ್ಲಬ್ ನೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಎಂ ಪಿ ಹೆಗಡೆ ಕೊಟ್ಟೆಗದ್ದೆ ನಮ್ಮ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘ ಶತಮಾನದ ಸಂಭ್ರಮದ ನಿಮಿತ್ತ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದೆ. ಸಂಘದ ಪ್ರಗತಿಪರ ಯೋಜನೆಗಳು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ ಸಂಘದ ಸದಸ್ಯರು ಪ್ರಯೋಜನ ಪಡೆದುಕೊಳ್ಳಲಿ ಎಂದರು.
ಎಂ ಆರ್ ಹೆಗಡೆ ಹೊನ್ನೇಕಟ್ಟಾ ಸ್ವಾಗತಿಸಿದರು. ಲ. ಶ್ರೀಕಾಂತ್ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಡಾ. ಜಿ.ಎಂ.ಹೆಗಡೆ, ಡಾ. ಅರುಣ ಪ್ರಭು, ಡಾ. ಸ್ವಾತಿ ವಿನಾಯಕ, ಡಾ. ವಿನಾಯಕ ಎಸ್, ಡಾ. ಐ.ಜಿ. ಧರ್ಮಶಾಲಾ, ಡಾ. ಮಹೇಶ ಹೆಗಡೆ, ಡಾ. ರವೀಂದ್ರ ಕೋಲ್ವೇಕರ್, ಡಾ. ವಿಶ್ವನಾಥ ಅಂಕದ, ಡಾ. ರಾಜೇಶ್ ಶೇಟ್, ಡಾಕ್ಟರ್ ಪೂಜಾ ಶೇಟ್, ಡಾ. ಪ್ರಥ್ವಿ ಡಾ.ಜಹೀರ್ ಆಹ್ಮದ್ ಮತ್ತು ಬಾಬುಲಾಲ್ ಸರೋಜಾ ಫಾರ್ಮಾ, ಕಪಿಲಾ ಮೆಡಿಕಲ್ ಏಜನ್ಸಿ ಚಂದ್ರಶೇಖರ್ ಹೆಗಡೆ ಅವರು ಶಿಬಿರಕ್ಕೆ ಔಷಧೀಯ ವ್ಯವಸ್ಥೆ ಮಾಡಿದರು. ಸಂಘದ ಸದಸ್ಯರು, ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಂಡರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ ಹೆಗಡೆ, ಪ್ರಾಥಮಿಕ ಶಾಲೆ ಅಧ್ಯಕ್ಷರು, ಮುಖ್ಯಾಧ್ಯಾಪಕರು ಗಜಾನನ ಪ್ರೌಢಶಾಲೆ ಶಿಕ್ಷಕರು, ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು