ಶಿರಸಿ : ಸಂಘದೊಂದಿಗೆ ದೀರ್ಘಕಾಲದಿಂದ ಉತ್ತಮ ವ್ಯಾವಹಾರಿಕ ಸಂಬಂಧ ಹೊಂದಿರುವ ನಿಷ್ಠಾವಂತ ಹಿರಿಯ ಸದಸ್ಯರನ್ನು ಹೃದಯಸ್ಪರ್ಷಿ ವಾತಾವರಣದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸುವ ಮೂಲಕ 68ನೇ ಅಖಿಲ ಭಾರತ ಸಹಕಾರಿ ಸಪ್ತಾಹವನ್ನು ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಂಘದ ನಿಷ್ಠಾವಂತ ಹಿರಿಯ 48 ಜನ ಸದಸ್ಯರುಗಳನ್ನು ಈ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಶ್ರೀ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಧಾನ ವ್ಯವಸ್ಥಾಪಕ ಶ್ರೀ ರವೀಶ ಹೆಗಡೆ, ಸಂಘದ ಹಿರಿಯ ಸದಸ್ಯರು ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ಹೆಗಡೆ ಕಡವೆ ಇವರು ಮಾತನಾಡಿ ಸಹಕಾರ ಸಂಘದ ಯಶಸ್ಸು ಸದಸ್ಯರ ಸಂಘದೊಂದಿಗಿನ ಸದಸ್ಯರ ನಿಷ್ಠೆ, ಪ್ರಾಮಾಣಿಕತೆ, ಹಾಗೂ ವ್ಯಾವಹಾರಿಕ ಬಾಂಧವ್ಯವನ್ನು ಅವಲಂಭಿಸಿರುತ್ತದೆ. ಸಂಘದ ಸದಸ್ಯರು ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ವ್ಯವಹಾರ ನಡೆಸಿ ಸೇವೆ-ಸೌಲಭ್ಯಗಳನ್ನು ಬಳಸಿಕೊಂಡಾಗ ಮಾತ್ರ ಒಂದು ಸಹಕಾರಿ ಸಂಘ ಅಭಿವೃದ್ಧಿ ಹೊಂದಿ ಉತ್ತುಂಗ ಸ್ಥಾನಕ್ಕೇರಲು ಸಾಧ್ಯವಾಗುತ್ತದೆ. ದೀರ್ಘಕಾಲದಿಂದ ನಿರಂತರವಾಗಿ ಉತ್ತಮ ವ್ಯಾವಹಾರಿಕ ಸಂಬಂಧ ಹೊಂದಿರುವ ನಿಷ್ಠಾವಂತ ಸದಸ್ಯರನ್ನು ಸಹಕಾರಿ ಸಪ್ತಾಹದ ಸಂದರ್ಭದಲ್ಲಿ ಸಮ್ಮಾನಿಸಿ ಗೌರವಿಸುವ ಕಾರ್ಯಕ್ರಮವನ್ನು ಕಳೆದ 5 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.
ಬಹುಮಾನ ವಿತರಣೆ
ಇದೇ ವೇದಿಕೆಯಲ್ಲಿ ಸಂಘದ ಸುಪರ್ ಮಾರ್ಕೆಟ್‍ನಲ್ಲಿ ನವರಾತ್ರಿಯಿಂದ ದೀಪಾವಳಿ ವರೆಗಿನ ರೂ.2,000 ಮೇಲ್ಪಟ್ಟು ಖರೀದಿಸಿದ ಖರೀದಿ ಬಿಲ್ಲ್‍ಗಳ ಮೇಲೆ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಹುಮಾನದ ಸಂಖ್ಯೆ (ಮೆಗಾ ಪ್ರೈಜ್) ಬಹುಮಾನದ ವಿವರ ವಿಜೇತರ ಹೆಸರು
ಮೊದಲ ಬಹುಮಾನ ಎಲ್.ಜಿ. ಡಬಲ್ ಡೋರ್ ಪ್ರಿಜ್ ಶ್ರೀ ಲಕ್ಷ್ಮಣ ಟಿ. ಗೌಡ ವಟ್ಲಕೈ,
ಎರಡನೇ ಬಹುಮಾನ ಬೆಳ್ಳಿ ದೀಪ ಶ್ರೀ ಅನಂತ ಜಿ. ಹೆಗಡೆ ಬೊಮ್ನಳ್ಳಿ, & ಶ್ರೀ ಸುಧಾಕರ ಕೆ. ಭಟ್ಟ ಕಲ್ಲೇಶ್ವರ
ಮೂರನೇ ಬಹುಮಾನ ಆಯ್. ಎಫ್. ಬಿ. ಮೈಕ್ರೋ ಓವನ್ ಶ್ರೀ ನಾರಾಯಣ ಜಿ. ಹೆಗಡೆ ಜೋಗಭಟ್ರಕೇರಿ & ಶ್ರೀ ದತ್ತಾತ್ರೇಯ ಎಮ್. ಹೆಗಡೆ ಶಿಂಗನಮನೆ & ಶ್ರೀ ಮಧುಕರ ರಾಮ ಭಟ್ಟ ಹಲಸಿನಕೈ,
ನಾಲ್ಕನೇ ಬಹುಮಾನ ಉಷಾ ಟೆಬಲ್‍ಟಾಪ್ ಗ್ರೈಂಡರ್ ಶ್ರೀ ಪ್ರವೀಣ ಎಸ್. ಭಟ್ಟ ವಾಜಗಾರ & ಶ್ರೀಮತಿ ರೇಖಾ ಗೊರೆ ಸೋಂದಾ & ಶ್ರೀ ಮಾಲತೇಶ ಕೆ. ಹೆಬ್ಬಾಳ ಸಹ್ಯಾದ್ರಿ ಕಾಲೋನಿ & ಶ್ರೀ ಮಹೇಶ ಪಿ. ಹೆಗಡೆ ಹೀನಗಾರ
ಐದನೇ ಬಹುಮಾನ ಟ್ರ್ಯಾವಲಿಂಗ್ ಬ್ಯಾಗ್ ಶ್ರೀ ಕಿರಣ ನಾಯ್ಕ ಹೊನ್ನಜ್ಜಿ & ಶ್ರೀ ಸೀತಾರಾಮ ಪಿ. ನಾಯ್ಕ ಹೊಳೆಬೈಲ್ & ಶ್ರೀ ಮಹಾಮಾತೆ ಹೆಬ್ಬೈಲು ಶ್ರೀ ಪದ್ಮಾವತಿಯಮ್ಮ ದೇವಿ ದೇವಸ್ಥಾನ & ಶ್ರೀ ಗೋಪಾಲ ಆರ್. ಹೆಗಡೆ ಹುಲಿಮನೆ & ಶ್ರೀ ಜಫರುಲ್ಲಾ ಖಾನ್ ಖಾದರ್ ಖಾನ್ ಕಸ್ತೂರ ಬಾ ನಗರ