ಯಲ್ಲಾಪುರ : ಕಾಡು ಪ್ರಾಣಿಗಳು ಕಾಡಿನಿಂದ ನಾಡಿಗೆ ಬಂದು ತನ್ನ ಗಮನಕ್ಕೆ ಬಂದ ಸಾಕು ಪ್ರಾಣಿಗಳ ಮೇಲೆ ದಾಳಿಮಾಡಿ ಅವುಗಳನ್ನು ಗಾಯಗೊಳಿಸುವ ಅಥವಾ ಅವುಗಳನ್ನು ಕೊಂದು ತಿನ್ನುವ ಪ್ರಕರಣಗಳು ಸುತ್ತಲ ಜನರ ಎದೆಯಲ್ಲಿ ನಡುಕ ಹುಟ್ಟಿಸಿಬಿಡುತ್ತದೆ. ಅಂತಹುದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ತೋಟದ ಬಳಿ ಮೇಯುತ್ತಿದ್ದ 3 ಆಕಳ ಮೇಲೆ ಇಂದು ಹುಲಿ ದಾಳಿ ಮಾಡಿ ಕೊಂದಿದ್ದು ಜನರು ಭಯಗೊಂಡ ಘಟನೆ ವರದಿಯಾಗಿದೆ.

RELATED ARTICLES  ಶಾಸಕಿ ಶಾರದಾ ಶೆಟ್ಟಿಯವರ ಮುತುವರ್ಜಿಯಿಂದ ಕುಮಟಾ ಘಟಕಕ್ಕೆ ನಾಲ್ಕು ಹೊಸ ಬಸ್.

ತಾಲೂಕಿನ ಆನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಬಿಸಗೋಡ ಕೊಲ್ಲಯಾಳದ ಸದಾಶಿವ ಭಟ್ಟ, ರಾಮನಾಥ ಭಟ್ಟ ಹಾಗೂ ದೇಸಾಯಿ ಮನೆಯ ಅವರ ತೋಟದ ಬಳಿ ಮೇಯುತ್ತಿದ್ದ 3 ಆಕಳ ಮೇಲೆ ಇಂದು ಹುಲಿ ದಾಳಿ ಮಾಡಿ ಕೊಂದಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಈ ಕುರಿತು ಅರಣ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಕಳೆದ ಎರಡು ತಿಂಗಳಿಂದ ಆನಗೋಡಗೇರಾಳ ಸಾವಗದ್ದೆ, ಬರಗದ್ದೆ, ಬಿಸಗೋಡ ಭಾಗದಲ್ಲಿ ನಾಯಿಗಳನ್ನು ಹಿಡಿದು ಒಯ್ಯುತ್ತಿದ್ದ ಹುಲಿ ಇದೀಗ ದನಗಳ ಮೇಲೆ ದಾಳಿ ಮಾಡಲಾರಂಭಿಸಿದೆ. ಹಗಲು ವೇಳೆ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಹುಲಿ ಕಂಡು ಬರುತ್ತಿರುವುದು ಆತಂಕ
ಹೆಚ್ಚಿಸಿದೆ ಎಂದು ಸಾರ್ವಜನಿಕರಿಂದ ಮಾತುಗಳೂ ಕೇಳಿಬರುತ್ತಿದೆ.

RELATED ARTICLES  ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸಿವಿಎಸ್‌ಕೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ