ವಿ.ಆರ ಏಲ್.ಬಸ್ಸ್ ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಹಾಗೂ ೨೫ ಜನರಿಗೆ ಗಾಯಗಳಾಗಿದೆ.

ಭಟ್ಕಳ ತಾಲೂಕಿನ ಅನಂತವಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಈ ಘಟನೆ ನಡೆದಿದೆ.ಮಂಗಳೂರಿನಿಂದ ಹೊನ್ನಾವರ ಕಡೆಗೆ ತೆರಳುತ್ತಿದ್ದ ಬಸ್ಸು, ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಟೆಂಪೋ ಮಧ್ಯೆ ಡಿಕ್ಕಿ ಸಂಭವಿಸಿದೆ.

RELATED ARTICLES  ಕುಮಟಾಕ್ಕೆ ನೂತನ ತಹಶೀಲ್ದಾರರಾಗಿ ಪ್ರವೀಣ.

ವಿ.ಆರ್ ಎಲ್ ಬಸ್ಸು ಚಾಲಕ ಉಮೇಶ್ ವಾಲ್ಮಿಕಿ (೩೫)
ಟೆಂಪೋದಲ್ಲಿದ್ದ ಪಾಲಾಕ್ಷಿ (೪೨), ಬೇಬಿ (೩೮) ಸುಬ್ರಹ್ಮಣ್ಯ (೧೫), ದಿವ್ಯಾ ಕುರ್ಡೇಕರ್ (೨೩) ಟೆಂಪೋ ಚಾಲಕ ನಾಗಪ್ಪ ಗಣಿಗಾರ್ (೪೬) ಮೃತಪಟ್ಟವರು

RELATED ARTICLES  ಮಿಸ್ಟರ್ ಸೌತ್ ಕರ್ನಾಟಕ ಆಗಿ ಹೊರ ಹೊಮ್ಮಿದ ಭಟ್ಕಳದ ಹುಡುಗ!

ಗಾಯಗೊಂಡವರನ್ನ ಉಡುಪಿ ಜಿಲ್ಲೆಯ ಮಣಿಪಾಲ್ ಹಾಗೂ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಭಟ್ಕಳದ ತಾಲೂಕು ಆಸ್ಪತ್ರೆ ಹಾಗೂ ಮುರಡೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಣಿಪಾಲಕ್ಕೆ ಕಳಿಸಲಾಗಿದೆ.

ಸ್ಥಳಕ್ಕೆ ಭಟ್ಕಳ ಡಿವೈಎಸ್ಪಿ ಶಿವಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಮಂಕಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.