ಕುಮಟಾ: “ವ್ಯಕ್ತಿಗೆ ಕುಲ ಮುಖ್ಯವಲ್ಲ ಗುಣ ಮುಖ್ಯ ಉತ್ತಮ ಗುಣ ಉಳ್ಳವರನ್ನು ಭಗವಂತನು ಉದ್ಧಾರ ಮಾಡುತ್ತಾನೆ ಆದ್ದರಿಂದ ಉತ್ತಮ ಗುಣಗಳನ್ನು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿ ಕೊಳ್ಳುವಂತೆ ತಿಳಿ ಹೇಳಿದ್ದಾರೆ ಕನಕದಾಸರು” ಎಂದು ಸೆಕೆಂಡರಿ ಹೈಸ್ಕೂಲ್ ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ ಹೇಳಿದರು.

ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಕನಕದಾಸರ ಆದರ್ಶ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು”. ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್ ರಾಮು ಹಿರೇಗುತ್ತಿ ” ಕನಕದಾಸರು ಸಂತ ಕವಿ,ಹರಿದಾಸ ಪರಂಪರೆಯ ಮತ್ತು ದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರು.ಯುಗ ಪ್ರವರ್ತಕ. ಕ್ರಾಂತಿಕಾರಿ ಹಾಗೂ ದಾಸ ಶ್ರೇಷ್ಠ ರು ಇವರ ವಿಶಿಷ್ಟ ಗುಣ ಗಳಾದ ಭಕ್ತಿ, ವೈರಾಗ್ಯ, ಕಾವ್ಯ ರಚನಾ ಪ್ರತಿಭೆ ಅದ್ಭುತವಾದದು” ಎಂದರು.

RELATED ARTICLES  ಕುಮಟಾ ಭಂಡಾರಿ ಸಮಾಜೋನ್ನತಿ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನ.

ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಕರಾದ ನಾಗರಾಜ ನಾಯಕ.ಮಹಾದೇವ ಗೌಡ.ಇಂದಿರಾ ನಾಯಕ.ಜಾನಕಿ ಗೊಂಡ.ಶಿಲ್ಪಾ ನಾಯಕ.ಸುಮನ್ ಫರ್ನಾಂಡೀಸ್. ಬಿ.ಎಡ್ ಪ್ರಶಿಕ್ಷಣಾರ್ಥಿ ಸ್ವಾತಿ ಗೋಪಾಲಕೃಷ್ಣ ಗುನಗಾ ಉಪಸ್ಥಿತರಿದ್ದರು. ಮಕ್ಕಳ ದಿನಾಚರಣೆ ನಿಮಿತ್ತವಾಗಿ ಹಮ್ಮಿಕೊಂಡ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಿಕ್ಷಕಿ ಶಿಲ್ಪಾ ಅರವಿಂದ ನಾಯಕ ನೀಡಿದ ( ಪ್ರಾಯೋಜಿತ)ಬಹುಮಾನ ನೀಡಲಾಯಿತು.

RELATED ARTICLES  ಕೆಂಡ ಹಾದ ಸಚಿವ ಶಿವರಾಮ ಹೆಬ್ಬಾರ್