ಯಲ್ಲಾಪುರ: ತಾಲೂಕಿನ ಆರ್ತಿಬೈಲ್ ಬಳಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ರಸ್ತೆ ಪಕ್ಕಕ್ಕೆ ಅರ್ಧ ವಾಲಿದ ಘಟನೆ ನಡೆದಿದೆ. ಯಲ್ಲಾಪುರ ತಾಲೂಕಿನ ಇಡಗುಂದಿ ಆರ್ತಿಬೈಲ್ ಬಳಿ ವೇಗದಲ್ಲಿ ಬಂದ ಬೆಂಗಳೂರು ನೋಂದಣಿಯ ಕಾರು ಬಸ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಪರಿಣಾಮವಾಗಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕಕ್ಕೆ ವಾಲಿದೆ ಎನ್ನಲಾಗಿದೆ.ರಸ್ತೆ ಪಕ್ಕದಲ್ಲಿ ಜಾಹೀರಾತು ಕಂಬ ಇಲ್ಲದಿದ್ದರೆ ಬಸ್ ಹೊಂಡಕ್ಕೆ ಬೀಳುವ ಸಾಧ್ಯತೆ ಇತ್ತು. ಡಿಕ್ಕಿಯ ರಭಸದಿಂದಾಗಿ ಬಸ್ ಹಾಗೂ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

RELATED ARTICLES  ಬೈಕ್ ಮೇಲೆ ತೆರಳುವ ವೇಳೆ ಬಿದ್ದು ಸಾವು : ಕೊಡೆ ಬಿಡಿಸುವಾಗ ನಡೆಯಿತು ಅವಘಡ..

ಅಂಕೋಲಾ ಘಟಕಕ್ಕೆ ಸೇರಿದ ಸಾರಿಗೆ ಬಸ್ ಇದಾಗಿದ್ದು, ರಸ್ತೆ ಪಕ್ಕದಲ್ಲಿ ಜಾಹೀರಾತು ಕಂಬವೊಂದು ಇದ್ದಿದ್ದರಿಂದ ಬಸ್ ಅದಕ್ಕೆ ತಾಗಿಕೊಂಡು ವಾಲಿ ನಿಂತಿದೆ ಎಂದು ಮಾಹಿತಿ ಲಭ್ಯವಾಗಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಪ್ರಾಣಹಾನಿಯಾಗಿಲ್ಲ. ಕಾರು ಚಾಲಕನ ನಿರ್ಲಕ್ಷ್ಯದಿಂದಾಗಿ ಸಾರಿಗೆ ಬಸ್ ಪ್ರಯಾಣಿಕರು ಕೆಲಕಾಲ ಆತಂಕ ಎದುರಿಸುವಂತಾಯಿತು. ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED ARTICLES  ಪ್ರತೀ ಜಿಲ್ಲೆಯಲ್ಲಿಯೂ ಗೋಸ್ವರ್ಗ ನಿರ್ಮಾಣವಾದಲ್ಲಿ ಅತ್ಯಂತ ಸಂತಸವಾಗುತ್ತದೆ: ರಾಘವೇಶ್ವರ ಶ್ರೀ