ಹೊನ್ನಾವರ : ತಾಲ್ಲೂಕಿನ ಕಡತೋಕಾ ಜನತಾ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನೂತನ ಅಧ್ಯಕ್ಷರಾಗಿ ಜಿ ಆರ್ ಭಟ್ ಧರ್ಮಶಾಲಾ ಹಾಗೂ ಕೆಲವು ಹೊಸ ಸದಸ್ಯರು ಸಮಿತಿಗೆ ಸೇರ್ಪಡೆಗೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿ ಆರ್ ಭಟ್ ಅವರು ಶಾಲೆಯ ಅಭಿವೃದ್ಧಿಗೆ ನಾವು ಪ್ರಾರಂಭದಲ್ಲಿಯೇ ರೂಪ ರೇಷೆಗಳನ್ನು ಹಾಕಿಕೊಂಡು ಇಲ್ಲಿಯ ಸಿಬ್ಬಂದಿ ವರ್ಗದವರನ್ನು, ಊರಿನ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಪ್ರಯತ್ನಿಸೋಣ ಎಂದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಪ್ರೊಫೆಸರ್ ಐ.ವಿ ಜೋಷಿಯವರು ಮಾತನಾಡುತ್ತ ನಮ್ಮೂರಿನ ಹೆಮ್ಮೆಯ ವಿದ್ಯಾಲಯ ಇದಾಗಿದ್ದು ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಹಾಗೂ ಅತಿಥಿ ಉಪನ್ಯಾಸಕರ ಕುಂದುಕೊರತೆಗಳನ್ನು ಹೋಗಲಾಡಿಸಿ ಅವರಿಗೆ ನೈತಿಕ ಬೆಂಬಲ ಸೂಚಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಆ ದಿಶೆಯಲ್ಲಿ ನಾವೆಲ್ಲರೂ ಕೆಲಸ ಮಾಡೋಣ ಎಂದರು. ಸದಸ್ಯರಾಗಿರುವ ಎಸ್ ವಿ ನಾಯ್ಕ್, ಮುಖ್ಯಾಧ್ಯಾಪಕರಾದ ಉಷಾ ಜಿ ಭಟ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಇನ್ನುಳಿದಂತೆ ಸದಸ್ಯರಾದ ಪಿ ಜಿ ಭಟ್ ಭಡ್ತಿ,ಡಾಕ್ಟರ್ ಎನ್ ವಿ ಭಟ್, ಗೌರಿ ಮುಕ್ರಿ , ಎನ್ ಕೆ ಭಟ್ ಜೋಗಿಮನೆ,. ಶ್ರೀನಾಥ ಶೆಟ್ಟಿ, ಮಂತು ಗೊನ್ಸಾಲ್ವಿಸ್, ನಾಗಪ್ಪ ಗೌಡ, ಶಂಕರ್ ಜೋಶಿ ಸಭೆಯಲ್ಲಿ ಉಪಸ್ಥಿತರಿದ್ದರು . ಕಾಲೇಜಿನ ಪ್ರಾಂಶುಪಾಲರಾದ ದುರ್ಗಮ್ಮ ಪಿ ಎಚ್ ಎಲ್ಲರನ್ನು ಸ್ವಾಗತಿಸಿದರೆ, ವಿ ಆರ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಂದಿರಾ ಯಾಜಿ ಅವರು ವಂದನಾರ್ಪಣೆ ಹಾಗೂ ಗಿರಿಜಾ ನಾಯ್ಕ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.