ಕುಮಟಾ : ತುಮಕೂರಿನ ಜಿಲ್ಲಾ ಕನ್ನಡ ಪರಿಷತ್ ಭವನದಲ್ಲಿ ನಡೆದ ಮಾತೃಭೂಮಿ ಸೇವಾ ಟ್ರಷ್ಟ್, ತುಮಕೂರು ಇವರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ವನ್ಯಜೀವಿ ಸಂರಕ್ಷಣೆ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಉರಗ ತಜ್ಞ ಪವನ್ ನಾಯ್ಕ ಅವರಿಗೆ ಪ್ರತಿಷ್ಠಿತ ಡಾ!! ಎ.ಪಿ.ಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಮಾತ್ರಭೂಮಿ ಸೇವಾ ಟ್ರಷ್ಟ್ ನ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಮಾನವ ಹಕ್ಕು ರಕ್ಷಣಾ ಹಾಗೂ ಜಾಗ್ರತಿ ಸಂಸ್ಥೆಯ ರಾಜ್ಯ ಸೆಕ್ರೆಟರಿ ಆದಂತ ಡಾ!!ಜ್ಯೋತಿ ಶ್ರೀನಿವಾಸ್, ಸಮಾಜ ಸೇವಕರು ಆದಂತಹ ಕೆಂಚನೂನು ಶಂಕರ, ಜನ್ಮಭೂಮಿ ಕನ್ನಡಿಗರ ಸೇನೆ ಸಂಸ್ಥೆಯ ರಾಜ್ಯಾಧ್ಯಕ್ಷರು ಕನ್ನಡ ಬಾಬು ಹುಸೇನ್, ಆದಿತ್ ಗ್ರುಪ್ ಎಂ ಡಿ ಚಂದನ್ ಗೌಡ, ಹೈಬ್ರಿಡ್ ನ್ಯೂಸ್ ನ ಸಿಇಓ ಬಿ ಎನ್ ಹೊರಪೇಟೆ, ಸೈನಿಕರಾದ ರವಿ, ಪ್ರಗತಿ ಟಿವಿ ಸಿಇಓ ಶಿಲ್ಪಶ್ರೀ, ಲೇಖಕರಾದ ಕಮಲಾ ರಾಜೇಶ್ ಉಪಸ್ಥಿತರಿದ್ದರು.