ಅಂಕೋಲಾ : ತಾಲೂಕಿನ ಪುರಸಭೆ ವ್ಯಾಪ್ತಿಯ ಲಕ್ಷ್ಮೇಶರದ ಎಂಜಿನೀಯರಿಂಗ್ ಶಿಕ್ಷಣ ಮುಗಿಸಿ ಉದ್ಯೋಗವನ್ನರಸುತ್ತ, ವಿವಿಧ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಯುವಕ ನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಈತನು ಕಳೆದ ಕೆಲ ತಿಂಗಳ ಹಿಂದಷ್ಟೇ ತನ್ನ ಎಂಜಿನೀಯರಿಂಗ್ ಶಿಕ್ಷಣ ಮುಗಿಸಿ ಮನೆಗೆ ವಾಪಸ್ಸಾಗಿದ್ದ. ತನ್ನ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಮತ್ತು ವೇತನ ಸಿಗುವುದು ಕಷ್ಟಸಾಧ್ಯ ಎಂದು ಸಂಬಂಧಿಯೋರ್ವರ ಬಳಿ ನಿರಾಶೆಯ ಭಾವನೆಯಲ್ಲಿ ಹೇಳಿಕೊಂಡಿದ್ದ ಎನ್ನಲಾಗಿದೆ.

RELATED ARTICLES  ಯಶೋಧರ ನಾಯ್ಕರೂ ಬಿ.ಜೆ.ಪಿ ಗೆ

ಆತ್ಮಹತ್ಯೆ ಮಾಡಿಕೊಂಡಿರುವ ಯುವಕನನ್ನು 25 ವರ್ಷದ ಗಜಾನನ ನಾರಾಯಣ ನಾಯಕ ಎಂದು ಗುರುತಿಸಲಾಗಿದೆ. ಸೋಮವಾರ ತಂದೆ ತಾಯಿ ಮತ್ತು ಸಹೋದರಿ ,ಮಂಗಲ ಕಾರ್ಯವೊಂದಕ್ಕೆ ಮನೆಯಿಂದ ಹೊರಗೆ ಹೋದ ವೇಳೆ, ತಾನೊಬ್ಬನೇ ಇದ್ದು ಮನೆಯ ಬಾಗಿಲ ಚಿಲಕ ಒಳ ಬದಿಯಿಂದ ಭದ್ರಪಡಿಸಿಕೊಂಡು, ಮನೆಯ ಹಾಲ್‌ನ ಫ್ಯಾನಿನ ಹುಕ್ಕಿಗೆ, ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

RELATED ARTICLES  ಸಂಪನ್ನವಾದ ಶ್ರೀ ನೆಬ್ಬೂರು ನಾರಾಯಣ ಭಾಗವತರ ಸಂಸ್ಮರಣೆ ಮತ್ತು ತಾಳಮದ್ದಳೆ ಕಾರ್ಯಕ್ರಮ.

ಈತ ಮೊದಲಿನಿಂದಲೂ ಮಿತಭಾಷಿ ಆಗಿದ್ದ ಗಜಾನನ ಅತ್ಯಂತ ಸರಳ ವ್ಯಕ್ತಿತ್ವವನ್ನು ರೂಡಿಸಿಕೊಂಡಿದ್ದ. ಇತ್ತೀಚೆಗೆ ಸ್ವಲ್ಪ ಏಕಾಂತವಾಗಿರುವುದನ್ನೇ ಹೆಚ್ಚಾಗಿ ಇಷ್ಟ ಪಡುತ್ತಿದ್ದ ಎನ್ನಲಾಗಿದೆ. ಇಂಜಿನಿಯರಿಂಗ್ ಪದವಿಗೆ ಸರಿಹೊಂದುವ ಉದ್ಯೋಗ ದೊರೆಯದಿದ್ದರೂ, ಇತರೆ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆ ಎದುರಿಸಿ, ನೌಕರಿ ಪಡೆಯಲು ಮನಸ್ಸು ಮಾಡಿ ಹೆಚ್ಚಿನ ವ್ಯಾಸಂಗಕ್ಕಾಗಿ , ಧಾರವಾಡಕ್ಕೆ ಹೋಗಿ ಕೋಚಿಂಗ್ ಪಡೆಯಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.