ಭಟ್ಕಳ: ಕೂಲಿ ಹಾಗೂ ಅಲ್ಲಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಎನ್ನಲಾದ ಕುಂದಾಪುರ ಮೂಲದ ವ್ಯಕ್ತಿಯೋರ್ವನ ಶವ ಪತ್ತೆಯಾದ ಘಟನೆ ನಗರದ ನವಾಯತ್ ಕಾಲೋನಿಯ ರಾಬಿತ್ ಸೊಸೈಟಿಯ ಹತ್ತಿರದಲ್ಲಿ ನಡೆದಿದೆ. ಈತ ಕೆಲವು ವರ್ಷದಿಂದ ಮೂರ್ಛೆರೋಗದಿಂದ ನರಳುತ್ತಿದ್ದು,ಇತ್ತೀಚೆಗೆ ಮದ್ಯಪಾನದ ಚಟ ಹೊಂದಿದ್ದು, ವಿಪರೀತ ಕುಡಿತದಿಂದ ಕುಸಿದು ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

RELATED ARTICLES  ಜೈ ಭೀಮ್ ಕಮಲ ಯಾತ್ರೆಗೆ ಶುಭಾರಂಭ:ಹೊಸ ಪ್ರಯತ್ನಕ್ಕೆ ಕೈಹಾಕಿದ ಕಾರವಾರದ ಕಮಲ ಪಾಳಯ!

ಮೃತ ಮಂಜುನಾಥ ಚಂದನ ಮೊಗವೀರ (59 ವರ್ಷ) ಕುಂದಾಪುರ ತಾಲೂಕಿನ ನಾಗೂರು ಕಿರಿಮಂಜೇಶ್ವರ ನಿವಾಸಿಯಾಗಿದ್ದು, ಕೂಲಿ ಮತ್ತು ಅಡುಗೆ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಕುರಿತು ನಗರ ಪೋಲೀಸ್‍ ಠಾಣೆಯಲ್ಲಿ ಪ್ರಕರಣದಾಖಲಾಗಿದೆ. ಪೊಲೀಸ್ ತನಿಖೆಯ ನಂತರದಲ್ಲಿ ಸಾವಿಗೆ ನಿಖರವಾದ ಕಾರಣ ತಿಳಿದುಬರಬೇಕಿದೆ.

RELATED ARTICLES  ಗಾಂಜಾ ಮಾರುತ್ತಿದ್ದ ಇಬ್ಬರು ಹಾಗೂ ಗಾಂಜಾ ಅಮಲಿನಲ್ಲಿದ್ದ ಇಬ್ಬರು ಕುಮಟಾ ಪೊಲೀಸ್ ಬಲೆಗೆ.