ಕಾರವಾರ : ಉತ್ತರ ಕನ್ನಡ ಜಿಲ್ಲಾ ಶಿರಸಿ ವೃತ್ತದ ಹೊಸಮಾರುಕಟ್ಟೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 22-11-2021 ರಂದು ಮಾದಕ ದ್ರವ್ಯ ಮಾರಾಟ ಮತ್ತು ಸೇವನೆ ತಡೆಯುವ ಉದ್ದೇಶದಿಂದ ಗಾಂಜಾ ಪೆಡ್ಲರ್ಗಳು ಹಾಗೂ ಮಾದಕ ವ್ಯಸನಿಗಳ ವಿರುದ್ಧದ ನಸುಕಿನ ಜಾವದ ಕಾರ್ಯಾಚರಣೆಯಲ್ಲಿ 15 ಜನರನ್ನು ಕಸ್ತೂರಬಾನಗರ, ನೆಹರೂನಗರ, ಇಂದಿರಾನಗರ, ಮರಾಠಿಕೊಪ್ಪ, ಕೆ.ಎಚ್.ಬಿ ಕಾಲೋನಿ, ಕೋಟೆಕೆರೆ ಸ್ಥಳಗಳಲ್ಲಿ ವಶಕ್ಕೆ ಪಡೆದು ಮುಂದಿನ ಕಾನೂನು ಪ್ರಕ್ರಿಯೆಯ ಬಗ್ಗೆ ವೈದ್ಯಕೀಯ ಪರೀಕ್ಷೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ಸದರ ಪರೀಕ್ಷಾ ವರದಿಯಲ್ಲಿ ಪರೀಕ್ಷೆಗೊಳಪಡಿಸಿದ 15 ಗಾಂಜಾ ವ್ಯಸನಿಗಳ ಪೈಕಿ ಈ ಕೆಳಕಂಡ 12 ವ್ಯಕ್ತಿಗಳು ಗಾಂಜಾ ಸೇವನೆ ಮಾಡಿದ ಬಗ್ಗೆ ದೃಡಪಟ್ಟಿರುತ್ತದೆ.
1) ಅಬೀದ ತಂದೆ ಮೊಹಮ್ಮದ ರಫೀಕ ಪ್ರಾಯ: 19 ವರ್ಷ ವೃತ್ತಿ: ವಾಟರ ಸರ್ವಿಸ ಕೆಲಸ ಸಾ: ಇಂದಿರಾ ನಗರ ಹಾಲಿ ಕೆ.ಹೆಚ.ಬಿ ಕಾಲೋನಿ ಶಿರಸಿ. 2) ರೋಷನತಂದೆ ಪ್ರದೀಪ ಪಾಲೇಕರ ಪ್ರಾಯ: 19 ವರ್ಷ ವೃತ್ತಿ: ಕಾರ್ಪೆಂಟರ ಸಾ: ಅಯ್ಯಪ ನಗರ ಶಿರಸಿ. 3) ಪ್ರಥ್ವಿ ತಂದೆ ಮನೋಜ ನಾರ್ವೇಕರ ಪ್ರಾಯ: 26 ವರ್ಷ ವೃತ್ತಿ: ವೆಲ್ಡಿಂಗ ಸಾ: ವಿವೇಕಾನಂದ ನಗರ ಶಿರಸಿ. 4) ಪ್ರಸನ್ನ ತಂದೆ ಗಣಪತಿ ಕುರಬರ ಪ್ರಾಯ: 42 ವರ್ಷ ವೃತ್ತಿ: ಚಾಲಕ ಸಾ: ಗಣೇಶ ನಗರ 1 ನೇ ಕ್ರಾಸ ಶಿರಸಿ. 5) ಮೊಹಮ್ಮದ ಮೊಸೀನ ತಂದೆ ನಜೀರಅಹ್ಮದ ಶೇಖ ಪ್ರಾಯ: 23 ವರ್ಷ ವೃತ್ತಿ: ಗ್ಯಾರೇಜ ಸಾ: ಕಸ್ತೂರಬಾನಗರ ಶಿರಸಿ. 6) ಮೊಹಮ್ಮದ ಯಾಸೀನ ತಂದೆ ನಜೀರಅಹ್ಮದ ಶೇಖ ಪ್ರಾಯ: 25 ವರ್ಷ ವೃತ್ತಿ: ಚಾಲಕ ಸಾ: ಕಸ್ತೂರಬಾನಗರ ಶಿರಸಿ. 7) ದೀಪಕ ತಂದೆ ಪರಮೇಶ್ವರ ಕೇರಳಕರ ಪ್ರಾಯ: 21 ವರ್ಷ ವೃತ್ತಿ: ಮನೆಗೆಲಸ ಸಾ: ಅಯ್ಯಪ್ಪ ನಗರ ಶಿರಸಿ. 8) ಸಮೀರ ಅಹ್ಮದ ತಂದೆ ಅಬ್ದುಲ ಘನಿ ಪ್ರಾಯ: 23 ವರ್ಷ ವೃತ್ತಿ: ಚಾಲಕ ಸಾ: ಕೋಟೆಕೆರೆ ಶಿರಸಿ. 9) ಮುಸ್ತಾಕ ತಂದೆ ಅಬ್ದುಲ ರೆಹಮಾನ ಹೊಸಪೇಟ ಪ್ರಾಯ: 24 ವರ್ಷ ವೃತ್ತಿ: ವೆಲ್ಡಿಂಗ ಸಾ : ಇಂದಿರಾ ನಗರ ಶಿರಸಿ. 10) ಶಿವಮೂರ್ತಿ ತಂದೆ ಈಶ್ವರ ನಾಯ್ಕ ಪ್ರಾಯ: 20 ವರ್ಷ ವೃತ್ತಿ: ವಿಧ್ಯಾರ್ಧಿ ಸಾ: ನೆಹರೂ ನಗರ ಶಿರಸಿ. 11) ಪೈಜಲಖಾನ ತಂದೆ ಅಬ್ದುಲ ರೌವುಪ್ ಖಾನ ಪ್ರಾಯ: 26 ವರ್ಷ ವೃತ್ತಿ: ವೆಲ್ಡಿಂಗ ಸಾ : ಕಸ್ತೂರಬಾನಗರ ಶಿರಸಿ.12) ಮನ್ಸೂರು ಕಲಂದರ ತಂದೆ ಅಬ್ದುಲ್ ಕರಿಂ ಹೊನ್ನಾವರ ಪ್ರಾಯ: 24 ವರ್ಷ ವೃತ್ತಿ: ವ್ಯಾಪಾರ ಸಾ: ಇಂದಿರಾ ನಗರ ಶಿರಸಿ.
ಈ ಮೇಲ್ಕಂಡವರುಗಳ ಮೇಲೆ ಎನ್.ಡಿ.ಪಿ.ಎಸ್ ಕಾಯ್ದೆ 1985 ಅಡಿಯಲ್ಲಿ ಎಫ್.ಐ.ಆರ್ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ. ಈ ವಿಶೇಷ ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪೊಲೀಸ ಅಧೀಕ್ಷಕರಾದ ಶ್ರೀ ಎಸ್ ಬದರೀನಾಥ, ಪೊಲೀಸ ಉಪಾಧೀಕ್ಷಕರು ಶ್ರೀ ರವಿ.ಡಿ. ನಾಯ್ಕ ಶಿರಸಿ ಉಪವಿಭಾಗ, ಪೊಲೀಸ ವೃತ್ತ ನಿರೀಕ್ಷಕರು ಶ್ರೀ ರಾಮಚಂದ್ರ ನಾಯಕ ಶಿರಸಿ ವೃತ್ತರವರ ಮಾರ್ಗದರ್ಶನದಲ್ಲಿ ಪೊಲೀಸ ಉಪನಿರೀಕ್ಷಕರು ಶ್ರೀ ಭೀಮಾಶಂಕರ ಸಿನ್ನೂರ ಸಂಗಣ ಶಿರಸಿ ಹೊಸಮಾರುಕಟ್ಟೆ ಪೊಲೀಸ ಠಾಣೆ ಹಾಗೂ ಸಿಬ್ಬಂದಿಯವರ ನೇತ್ರತ್ವದಲ್ಲಿ ಪ್ರಥಮ ಬಾರಿಗೆ ಶಿರಸಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು.
ಮಾದಕದ್ರವ್ಯ ಮಾರಾಟ ಮತ್ತು ಸೇವನೆಯಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಈ ತರಹದ ವಿಶೇಷ ಕಾರ್ಯಾಚರಣೆಯನ್ನು ಜಿಲ್ಲೆಯಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.