ಕಾರವಾರ : ನಗರದ ಪಿಕಳೆ ರಸ್ತೆ ಹಾಗೂ ಗ್ರೀನ್ ಸ್ಟ್ರೀಟ್ ನಲ್ಲಿನ ಅಕ್ರಮ ಕಟ್ಟಡವನ್ನು ಇಂದು ನಗರಸಭೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಮಾಡಿದರು.

ನಗರಸಭೆ ಆಯುಕ್ತ ಯೋಗಿಶ್ವರ್ ಹಾಗೂ ಅವರ ಸಿಬ್ಬಂದಿಗಳು ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿ ನಿಯಮಬಾಹಿರವಾಗಿ ಕಟ್ಟಿದ ಕಟ್ಟಡ ತೆರವು ಕಾರ್ಯಾಚರಣೆ ಮಾಡಿದರು.

RELATED ARTICLES  ಲೈನ್ಸ್ ಕ್ಲಬ್ ಕುಮಟಾ ಆಶ್ರಯದಲ್ಲಿ ಆಶಾ ಕಾರ್ಯಕರ್ತೆಯರ ಅಭಿನಂದನಾ ಕಾರ್ಯಕ್ರಮ

ನಗರದ ಪಿಕಳೆ ರಸ್ತೆಯಲ್ಲಿ ವಾಹನ ನಿಲುಗಡೆಗಾಗಿ ಮೀಸಲಿಟ್ಟ ಜಾಗದಲ್ಲಿ ನಿರ್ಮಿಸಿದ ಎಚ್.ಡಿ.ಎಪ್.ಸಿ ಎ.ಟಿ.ಎಮ್ ಇರುವ ಕಟ್ಟಡ ಹಾಗೂ ಗ್ರೀನ್ ಸ್ಟ್ರೀಟ್ ನಲ್ಲಿ ಪುಟ್ ಪಾತ್ ಗೆ ಹೊಂದಿಕೊಂಡಿರುವ ತಾಜ್ ಫಾಸ್ಟ್ ಫುಡ್ ಕಟ್ಟಡ ಮತ್ತು ದೋಬಿಘಾಟ್ ರಸ್ತೆಯಲ್ಲಿ ಒಂದು ಕಟ್ಟಡ ತೆರವು ಮಾಡಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಗರಸಭೆ ಆಯುಕ್ತ ಯೋಗಿಶ್ವರ್ ” ಕಾನೂನು ಉಲ್ಲಂಘನೆ ಮಾಡಿ ನಿರ್ಮಾಣ ಮಾಡಿದ ಎಲ್ಲಾ ಕಟ್ಟಡ ಮಾಲಿಕರಿಗೂ ನೋಟಿಸ್ ನೀಡಲಾಗಿದೆ. ನಿರ್ದಿಷ್ಟ ಸಮಯದಲ್ಲಿ ನೋಟಿಸ್ ಗೆ ಉತ್ತರ ನೀಡದೇ ಇದ್ದಲ್ಲಿ ಯಾವುದೇ ಮುಲಾಜಿಲ್ಲದೆ ಕಟ್ಟಡ ತೆರವು ಕಾರ್ಯಾಚರಣೆ ಮಾಡುತ್ತೇವೆ ” ಎಂದರು.

RELATED ARTICLES  ಗೋಕರ್ಣದಲ್ಲಿ "ಶಿವಪದ" ವೇದಿಕೆ ಉದ್ಘಾಟನೆ: ನಿತ್ಯ ಶಿವನಿಗೆ ನಡೆಯಲಿದೆ ನಾದಾಭಿಷೇಕ.