ಇಸ್ಪೀಟ್ ಎಲೆ ಬಳಿಸಿ ಅಂದರ ಬಾಹರ ಆಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಹಾಗೂ ಹೊನ್ನಾವರದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ ಘಟನೆ ವರದಿಯಾಗಿದೆ.

ಭಟ್ಕಳದಲ್ಲಿ ಪ್ರಕರಣ.

ಇಸ್ಪೀಟ್ ಎಲೆ ಬಳಿಸಿ ಅಂದರ ಬಾಹರ ಆಡುತ್ತಿದ್ದ ನಾಲ್ವರನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ. ಶಿರಾಲಿಯ ತಟ್ಟಿಹಕ ಬ್ರಿಡ್ಜ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಶಿರಾಲಿಯ ತಟ್ಟಿಹಕ್ಕಿನ ಗೋಪಾಲ ವೆಂಕಟಯ್ಯ ದೇವಡಿಗ, ಗುಮ್ಮನಹಕ್ಕಿನ ಮಂಜುನಾಥ ಮಾಸ್ತಪ್ಪ ನಾಯ್ಕ, ಸಾರದೊಳೆಯ ಸಣ್ಣಪ್ಪು ಕಂಚಿಗುಂಡಿ ನಾಯ್ಕ, ನಾಗಪ್ಪ ನಾರಾಯಣ ನಾಯ್ಕ ಎನ್ನುವವರು ಇಸ್ಪೀಟ್ ಎಲೆ ಬಳಸಿ ಅಂದರೆ ಬಾಹರ ಆಡುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಗ್ರಾಮೀಣ ಠಾಣೆಯ ಕೈಂ ಪಿಎಸೈ ರತ್ನಾ ಸಂಕಪ್ಪ ಕುರಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿತರಿಂದ ಇಸ್ಪೀಟ್ ಎಲೆಗಳು, 26750 ವಶಪಡಿಸಿಕೊಂಡಿದ್ದಾರೆ.

RELATED ARTICLES  ಮಾನವನಿಗೆ ಸಾಂಸ್ಕøತಿಕ ಕಾರ್ಯಗಳೊಂದಿಗೆ ಕ್ರೀಡೆಗಳು ಕೂಡಾ ಅತ್ಯಗತ್ಯವಾಗಿದೆ -ನಾಗರಾಜ ನಾಯಕ ತೊರ್ಕೆ.

ಹೊನ್ನಾವರದಲ್ಲಿಯೂ ಪ್ರಕರಣ

ಪಟ್ಟಣದ ಗಂಧದಹಿತ್ತ ರಸ್ತೆಯ ನಾಗರ ಕಟ್ಟೆ ಹತ್ತಿರ ಓಸಿ ಮಟ್ಕಾ ಜೂಜಾಡುತ್ತಿದ್ದವರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲಾಗಿದೆ. ದಾಳಿ ಸಮಯದಲ್ಲಿ ಒಟ್ಟೂ 1510 ರೂಪಾಯಿ ಹಾಗೂ ಇನ್ನಿತರ ಪರಿಕರ ವಶಕ್ಕೆ ಪಡೆಯಲಾಗಿದೆ. ಹಳದಿಪುರದ ಸಾಲಿಕೇರಿಯ ಗಿರೀಶ ಓ. ಸಿ ಅಂಕೆ-ಸಂಖ್ಯೆಗಳ ಮೇಲೆ ಪಂಥವಾಗಿ ಕಟ್ಟಿಸಿಕೊಂಡು ಓ. ಸಿ ಆಡುತ್ತಿದ್ದಾಗ ದಾಳಿ ಮಾಡಿ ಓಸಿ ಬುಕ್ಕಿಯಾದ ವಿನಾಯಕ, ಕೊಳಗದ್ದೆ ಖರ್ವಾ ಹೊನ್ನಾವರ ಇವರಿಗೆ ನೀಡುತ್ತಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದ್ದು ವಿನಾಯಕ ಗೌಡನ ಮೇಲೂ ಪ್ರಕರಣ ದಾಖಲಿಸಲಾಗಿದೆ.

RELATED ARTICLES  ಮಿರ್ಜಾನ್ ಸಮೀಪ ಅಪಘಾತ : ಓರ್ವ ಸಾವು.