ಕುಮಟಾ : ಅಳಿವಿನಂಚಿನಲ್ಲಿರುವ ಭಾರತೀಯ ಗೋಕುಲದ ಉಳಿವಿಗಾಗಿ ಅಹರ್ನಿಶಿ ಕಾರ್ಯನಿರ್ವಹಿಸುತ್ತಿರುವ, ಮುಂದಿನ ಪೀಳಿಗೆಗೂ ಅಮೂಲ್ಯ ಸಂತತಿಗಳನ್ನು ಉಳಿಸಿಕೊಳ್ಳುವ ಧ್ಯೇಯವಿರುವ ವಿಶ್ವದ ಪ್ರಪ್ರಥಮ ಗೋಬ್ಯಾಂಕ್ ಆಗಿರುವ ಅಮೃತಧಾರಾ ಗೋಶಾಲೆ ಹೊಸಾಡಿನ ಗೋಶಾಲೆಯಲ್ಲಿ ಇಂದು ಅಂದಾಜು ಮೂರುನೂರು ಗೋವುಗಳಿವೆ. ದಿನದಿಂದ ದಿನಕ್ಕೆ ಏರುತ್ತಿರುವ ಪಶು ಆಹಾರ, ಹುಲ್ಲು, ಗೋಪಾಲಕರ ವೇತನ ಇತ್ಯಾದಿಗಳಿಂದ ನಿರ್ವಹಣಾ ವೆಚ್ಚ ಪ್ರತಿ ತಿಂಗಳಿಗೆ 4, 4.50 ಲಕ್ಷ ವಾಗುತ್ತದೆ. ಗೋಶಾಲಾ ನಿರ್ವಹಣೆ ತುಂಬಾ ಕಷ್ಟದಾಯಕವಾಗಿದ್ದು, ಆರ್ಥಿಕ ವೆಚ್ಚ ಗಳನ್ನು ಸ್ವಲ್ಪವಾದರೂ ತೂಗಿಸಿಕೊಳ್ಳುವ ದೃಷ್ಟಿಯಿಂದ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಮಹಾವಿಷ್ಣು ಕಲಾ ಬಳಗದ ಆಶ್ರಯದಲ್ಲಿ ಕುಮಟಾ ತಾಲೂಕಿನ ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ದಿನಾಂಕ 26 – 11- 2021 ರಂದು ಸಾಯಂಕಾಲ 6:00 ರಿಂದ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಗೋ ಶಾಲೆಯ ಸಹಾಯಾರ್ಥ ಅಭಿಮನ್ಯು , ರಾಮಾಂಜನೇಯ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದೊಂದು ಗೋಸೇವಾರೂಪದ ಆರ್ಥಿಕ ಸಂಗ್ರಹಣೆಯ ಕಾರ್ಯಕ್ರಮವಾಗಿದೆ. ತಾವು ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಿ ಗೋಸೇವಾ ಕಾಣಿಕೆ ನೀಡಿ ಯಕ್ಷಗಾನವನ್ನು ಆಸ್ವಾದಿಸಿ ಕಲಿಯುಗದ ದೇವತಾ ಸ್ವರೂಪಿ ಕಾಮಧೇನುವಿನ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಮೃತಧಾರಾ ಗೋ ಬ್ಯಾಂಕ್ ಹೊಸಾಡದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.