ಮುಂಡಗೋಡ: ಉತ್ತರ ಕನ್ನಡದಲ್ಲಿ ನಾಪತ್ತೆ ಪ್ರಕರಣ ಮುಂದುವರೆದಿದ್ದು ಕಾಲೇಜಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ವಿದ್ಯಾರ್ಥಿನಿಯೋರ್ವಳು ಕಾಲೇಜಿಗೂ ಹೋಗದೆ, ವಾಪಸ್ ಮನೆಗೂ ಬಾರದೆ ನಾಪತ್ತೆಯಾಗಿದ್ದಾಳೆ ಎಂಬ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಆಕೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಮೂಲಕ ಉತ್ತರಕನ್ನಡದಲ್ಲಿ ನಾಪತ್ತೆ ಪ್ರಕರಣದ ಸರಣಿ ಮುಂದುವರೆದಿದೆ.

RELATED ARTICLES  ಸ್ವಸಹಾಯ ಸಂಘ ಎಂದರೆ ಜೇನುಗೂಡು ಇದ್ದಂತೆ - ಉಮೇಶ ಮುಂಡಳ್ಳಿ

ತಾಲೂಕಿನ ಹುಲಿಹೋಂಡಗ್ರಾಮದ ಸವಿತಾ ಹನುಮಂತ ನೀಲಿ ಎಂಬುವವಳೇ ನಾಪತ್ತೆಯಾದ ವಿದ್ಯಾರ್ಥಿನಿಯಾಗಿದ್ದು. ನ. 23ರಂದು ಬೆಳಗ್ಗೆ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವಳು ಕಾಲೇಜಿಗೂಹೋಗದೆ, ಮರಳಿ ಮನೆಗೂ ಬಾರದೆ ನಾಪತ್ತೆಯಾಗಿದ್ದು, ತನ್ನ ಮಗಳನ್ನು ಹುಡುಕಿಕೊಡುವಂತೆ ವಿದ್ಯಾರ್ಥಿನಿ ತಾಯಿ ಶಶಿಕಲಾ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮುಂಡಗೋಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

RELATED ARTICLES  ಸಿರಿಗನ್ನಡದ ಗೆಳೆಯರ ಬಳಗದವರ ಕಾರ್ಯ ನಿಜವಾಗಿಯೂ ಪ್ರಗತಿಪರವಾದದ್ದು -ಸಾಹಿತಿ ಉಮೇಶ ಮುಂಡಳ್ಳಿ.