ಕಾರವಾರ: ತಾಲೂಕಿನ ಗೊಟೆಗಾಳಿಯ ವ್ಯಕ್ತಿಯೊಬ್ಬರು ಆನ್‌ಲೈನ್ ಆಪ್ ನಲ್ಲಿ ಕಾರ್ ಕವರನ್ನು ಖರೀದಿಸಿದ ಸಂದರ್ಭದಲ್ಲಿ ಬರೋಬ್ಬರಿ 7ಲಕ್ಷ ಹಣವನ್ನು ಕಳೆದುಕೊಂಡ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಕಾರವಾರದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಅರವಿಂದ ಪರಮಹಂಸ ತಿವಾರಿ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಇವರು ಆನ್‌ಲೈನ್ ಆಪ್‌ನಲ್ಲಿ ಕಾರ್ ಕವರನ್ನು ಆರ್ಡರ್ ಮಾಡಲಾಗಿತ್ತು. ಅದು ಸಮಯಕ್ಕೆ ಸರಿಯಾಗಿ ಡಿಲೇವರಿಯಾಗಿದ್ದು, ಕಾರ್ ಕವರನ್ನು ತನ್ನ ಕಾರ್‌ಗೆ ಅಳವಡಿಸಲು ಹೋದಾಗ ಅದು ಸರಿಯಾಗಿ ಹೊಂದಾಣಿಕೆ ಆಗಿಲ್ಲ. ಹೀಗಾಗಿ ಕಾರ್ ಕವರ್‌ನ್ನು ವಾಪಸ್ ಮಾಡಲು ನಿರ್ಧರಿಸಿದ್ದು, ಪಾರ್ಸಲ್ ಕವರ ಒಳಗಡೆ ಇದ್ದ ಕಾರ್‌ ಕವರ್ ನ ಮೇಲೆ ನಮೂದಿದ್ದ ಕಂಪನಿಯ ಕಾಂಟೆಕ್ಟ್ ನಂಬರ್ ಗೆ ಕರೆ ಮಾಡಿದ್ದಾರೆ. ತನಗೆ ಡಿಲೇವರಿ ಆಗಿದ್ದ ಕಾರ್ ಕವರ್ ತನ್ನ ಕಾರಿಗೆ ಸರಿ ಹೊಂದುತ್ತಿಲ್ಲ . ಹೀಗಾಗಿ ಅದನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಅದಕ್ಕೆ ಅವರು ಐದು ರೂಪಾಯಿ ಟೋಕನ್ ಹಣ ಪಾವತಿಸಬೇಕಾಗುತ್ತದೆಂದು ಹೇಳಿ ಬ್ಯಾಂಕ್ ಖಾತೆಯ ಮಾಹಿತಿಯನ್ನು ಕೇಳಿದ್ದಾರೆ. ಈ ವೇಳೆ ಬ್ಯಾಂಕ್ ಖಾತೆಯ ಮಾಹಿತಿ ನೀಡಿದ್ದು, ಬಳಿಕ ಒಂದು ದಿನ ಬಿಟ್ಟು ಖಾತೆ ಪರಿಶೀಲಿಸಿದಾಗ ಖಾತೆಯಿಂದ ಏಳು ಲಕ್ಷ ರೂಪಾಯಿ ಹಣ ಡ್ರಾ ಆಗಿದೆ.

RELATED ARTICLES  ಚಿತ್ರಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಗೀತಾ ಜಯಂತಿ ಆಚರಣೆ

ಇದರಿಂದ ವಿಚಲಿತರಾದ ಅರವಿಂದ ತಿವಾರಿ ಅವರು ಹಣವನ್ನು ವಂಚಿಸಿದ ಅಪರಿಚಿತ ಆರೋಪಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾರವಾರ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.