ಹೊನ್ನಾವರ: ಘನತ್ಯಾಜ್ಯ ಘಟಕವಿಲ್ಲದ ಕುಮಟಾ ಪುರಸಭೆ ಕಸವನ್ನು ಪಕ್ಕದ ಹೊನ್ನಾವರಕ್ಕೆ ಕಸ ಹಾಕಲು ಬಂದ ತ್ಯಾಜ್ಯ ತುಂಬಿದ ವಾಹನವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರು ಹಾಗೂ ಆರೋಗ್ಯ ನಿರೀಕ್ಷಕರು ತಡೆದು ವಾಪಸ್ ಕಳುಹಿಸಿದ ಘಟನೆ ವರದಿಯಾಗಿದೆ. ಪಟ್ಟಣದ ತ್ಯಾಜ್ಯ ವಿಲೇವಾರಿ ಮಾಡಲು ತ್ಯಾಜ್ಯ ವಿಲೇವಾರಿ ಘಟಕವನ್ನು ಇಟ್ಟುಕೊಳ್ಳದೆ ಹೊನ್ನಾವರಕ್ಕೆ ತಾಜ್ಯ ವಿಲೇವಾರಿ ಮಾಡಲು ಬಂದ ವಾಹನವನ್ನು ಸ್ಥಳೀಯರ ಮಾಹಿತಿ ಮೇರೆಗೆ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶಿವರಾಜ ಮೇಸ್ತ ಹಾಗೂ ಆರೋಗ್ಯ ನಿರೀಕ್ಷಕರಾದ ಸುನಿಲ್ ಗಾವಡೆ ವಾಹನವನ್ನು ವಾಪಸ್ ಕುಮಟಾಕ್ಕೆ ಕಳುಹಿಸಿದ್ದಾರೆ.

RELATED ARTICLES  ಉಚಿತ ವೈದ್ಯಕೀಯ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರ ಸಂಪನ್ನ

ಎರಡು ದಿನದ ಹಿಂದೆ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರು, ವಿವಿಧ ಸಂಘಟನೆಗಳು ಹಾಗೂ ಸಮಾನ ಮನಸ್ಕರು ಸೇರಿ ಕುಮಟಾ ಕಸ ಹೊನ್ನಾವರಕ್ಕೆ ವಿಲೇವಾರಿ ಮಾಡಬಾರದು ಮಾಡಿದರೆ ಮುಂದಿನ ನಡೆಗೆ ನೀವೇ ಹೊಣೆಗಾರರಾಗುತ್ತೀರಿ ಎಂದು ಮನವಿ ನೀಡಿದ್ದರು. ಆ ಕಾರಣದಿಂದಾಗಿ ಅಧ್ಯಕ್ಷರು ಹಾಗೂ ಸಿಬ್ಬಂದಿಗಳು ಸಾರ್ವಜನಿಕರು ಜಮಾವಣೆ ಆಗಿ ಅವಾಂತರ ಆಗಬಾರದೆಂಬ ಉದ್ದೇಶದಿಂದ ತಂದಿರುವ ತಾಜ್ಯವನ್ನೂ ವಾಪಸ್ ಕಳುಸಿದ್ದಾರೆ.

RELATED ARTICLES  ಹಕ್ಕು ಪಡೆಯುವುದೂ ಮತದಾರನ ಕರ್ತವ್ಯ: ಸಿಇಒ ಎಲ್. ಚಂದ್ರಶೇಖರ