ಕಾರವಾರ: ಕೊರೋನಾ ರೂಪಾಂತರಿಯ ಭೀತಿ ಮತ್ತೆ ಪ್ರಾರಂಭವಾಗುತ್ತಿರುವಂತೆ ಆರೋಗ್ಯ ಇಲಾಖೆ ಚುರುಕಿನ ಕಾರ್ಯ ಪ್ರಾರಂಭಿಸಿದೆ ಇನ್ನೊಂದೆಡೆ ಜಿಲ್ಲಾಡಳಿತವೂ ಕಠಿಣ ಕ್ರಮಕ್ಕೆ ಮುಂದಾಗಿದೆ. ಕೊರೋನಾ ನಿಯಂತ್ರಣದ ದಿಸೆಯಲ್ಲಿ ಲಸಿಕಾಕರಣದ ಕಾರ್ಯಕ್ಕೆ ಮತ್ತೆ ಚುರುಕುಗೊಂಡಿದೆ. ಇಂದು ಗೂಗಲ್ ಮೀಟ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉತ್ತರ ಕನ್ನಡ ‘ಜಿಲ್ಲೆಯಲ್ಲಿ 45,725 ಮಂದಿ ಕೋವಿಡ್ ಲಸಿಕೆಯ ಒಂದೂ ಡೋಸನ್ನು ಇನ್ನೂ ಪಡೆದುಕೊಂಡಿಲ್ಲ. ಜಿಲ್ಲೆಯಲ್ಲೇ ಭಟ್ಕಳ ಭಾಗದಲ್ಲಿ ಅತೀ ಹೆಚ್ಚು ಜನರು ಕೋವಿಡ್ ಲಸಿಕೆಯ ಮೊದಲ ಸುತ್ತನ್ನು ಸಹ ಪಡೆದಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲೆಯ ನಗರ, ಪಟ್ಟಣ ಭಾಗದಲ್ಲಿ 20,298 ಮಂದಿ, ಗ್ರಾಮೀಣ ಭಾಗದಲ್ಲಿ 25,427 ಲಸಿಕೆ ಪ‍ಡೆದಿಲ್ಲ. ಸಾರ್ವಜನಿಕರು ಸ್ಪಂದಿಸದಿದ್ದರೆ ಅವರನ್ನು ಎಚ್ಚರಿಸುವ ಕ್ರಮದ ಭಾಗವಾಗಿ, ಸಹಕಾರ ಸಂಸ್ಥೆಗಳು, ಬ್ಯಾಂಕ್ ಮೊದಲಾದ ಸಾರ್ವಜನಿಕ ವ್ಯವಹಾರ ಸ್ಥಳಗಳಿಗೆ ಭೇಟಿ ನೀಡುವವರನ್ನು ಲಸಿಕೆ ಪಡೆದುಕೊಂಡಿರುವ ಬಗ್ಗೆ ವಿಚಾರಿಸಲು ಸೂಚಿಸಲಾಗಿದೆ.ಆಯಾ ಸಂಸ್ಥೆಗಳಿಗೆ ಅವರ ಪ್ರವೇಶವನ್ನು ನಿಷೇಧಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದೂ ಎಚ್ಚರಿಕೆ ನೀಡಿದರು.

RELATED ARTICLES  ಮೊರಬದ ಹಳ್ಳೇರ ಸಮಾಜದ ಹೆಂಗಳೆಯರ ಮನಸೂರೆಗೊಂಡ ಶಿವರಾತ್ರಿ ಸಂಭ್ರಮ.

ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುವವರನ್ನು ಪ್ರತಿ 15 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗುವುದು. ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವಿವಿಧ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗುವುದು. ಸೋಂಕಿನ ಪ್ರಕರಣಗಳು ವಿವಿಧ ಜಿಲ್ಲೆಗಳಲ್ಲಿ ಹೆಚ್ಚುತ್ತಿದ್ದು, ಉತ್ತರ ಕನ್ನಡದಲ್ಲಿ ಹರಡದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 10.78 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿಯಿದೆ. 9.97 ಲಕ್ಷ ಮಂದಿ (ಶೇ 93ರಷ್ಟು) ಮೊದಲ ಡೋಸ್ ಪಡೆದಿದ್ದಾರೆ. 6.66 ಲಕ್ಷ ಜನ (ಶೇ 67ರಷ್ಟು) ಎರಡನೇ ಡೋಸ್ ಹಾಕಿಸಿಕೊಂಡಿದ್ದಾರ ಎಂದು ಮುಲ್ಲೈ ಮುಗಿಲನ್ ತಿಳಿಸಿದರು. ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಲಸಿಕೆ ಪಡೆಯದವರ ಪಟ್ಟಿಯನ್ನು ಆರೋಗ್ಯ ಉಪ ಕೇಂದ್ರವಾರು ಸಿದ್ಧಪಡಿಸಲಾಗಿದೆ. ಜಿಲ್ಲೆಯಲ್ಲಿರುವ 334 ಆರೋಗ್ಯ ಉಪ ಕೇಂದ್ರಗಳಿವೆ. ಅವುಗಳ ಪೈಕಿ 107 ಕೇಂದ್ರಗಳಲ್ಲಿ ಲಸಿಕೆಯ ಒಂದೂ ಡೋಸ್ ಪಡೆಯದ ತಲಾ 100ಕ್ಕಿಂತ ಹೆಚ್ಚು ಮಂದಿಯಿದ್ದಾರೆ. ಅಂತಹ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಮನೆ, ಮನೆಗೆ ಕಳುಹಿಸಿ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

RELATED ARTICLES  ಹಿರೇಗುತ್ತಿ ಹೈಸ್ಕೂಲ್ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯಲ್ಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ