ಶಿರಸಿ : ಉತ್ತರ ಕನ್ನಡದಲ್ಲಿ ಒಂದಿಲ್ಲೊಂದು ತಾಲೂಕಿನಿಂದ ಆತ್ಮಹತ್ಯೆ ಪ್ರಕರಣಗಳು ಹಾಗೂ ಅಪರಾಧ ಪ್ರಕರಣಗಳು ವರದಿಯಾಗುತ್ತಿದೆ ಇಂತಹ ಪ್ರಕರಣ ಮತ್ತೆ ಇಂದೂ ಮುಂದುವರೆದಿದೆ. ರೈಲಿಗೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಇದು ಆತ್ಮಹತ್ಯೆಯೋ ಅಥವಾ ಇನ್ನಾವ ರೀತಿಯಲ್ಲಿ ಈ ಘಟನೆ ಸಂಭವಿಸಿತು ಎನ್ನುವುದರ ಬಗ್ಗೆ ತನಿಖೆ ನಡೆದಿದೆ. ಶನಿವಾರ ರಾತ್ರಿ ಸಾಗರ ನಗರದ ಶಿರವಾಳ ರೈಲ್ವೆ ಗೇಟ್ ಸಮೀಪದಲ್ಲಿ ಶಿರಸಿ ಮೂಲದ ವ್ಯಕ್ತಿಯೊರ್ವ ಸಾಗರ-ತಾಳಗುಪ್ಪ ರೈಲಿಗೆ ಸಿಲುಕಿ ಸಾವಿಗೀಡಾದ ಘಟನೆ ನಡೆದಿದೆ.
ಶಿರಸಿ ತಾಲೂಕಿನ ಹುಲೇಕಲ್ ನ ನಾಗರಾಜ್ ಹೆಗಡೆ(31) ಎಂಬುವರೆ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.ಇವರು ಸಾಗರದ ಜೆ.ಎಂ.ಎಫ್ ಸಿ ಯಲ್ಲಿ ಬೆಂಚ್ ಕ್ಲರ್ಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ರೈಲಿಗೆ ಸಿಲುಕಿ ದೇಹ ಚಿದ್ರ ಚಿದ್ರಗೊಂಡಿದ್ದು ಬಹುತೇಕ ತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.