ಯಲ್ಲಾಪುರ : ರಾಷ್ಟ್ರೀಯ ಹೆದ್ದಾರಿರ ಆರತಿಬೈಲ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ ಗಟಾರಕ್ಕಿಳಿದ ಘಟನೆ ಸೋಮವಾರ ನಡೆದಿದೆ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೊರಟ್ಟಿದ್ದ ಟ್ಯಾಂಕರ ಲಾರಿ ಆರತಿಬೈಲ್ ಘಟ್ಟದ ಇಳಿಜಾರಿನ ಅಪಾಯಕಾರಿ ತಿರುವಿನಲ್ಲಿ ಸಾಗುವಾಗ ನಿಯಂತ್ರಣ ತಪ್ಪಿಟ್ಯಾಂಕರ್‌ನ‌ ಮುಂಭಾಗ ಸುರಕ್ಷತಾ ತಡೆಬೇಲಿ ದಾಟಿ‌ ಗಟಾರಕ್ಕಿಳಿದಿದೆ.

RELATED ARTICLES  ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 82 ಕರೊನಾ ಕೇಸ್

ಚಾಲಕ ನಿರ್ವಾಹಕ ಅಪಾಯದಿಂದ‌ ಪಾರಾಗಿದ್ದಾರೆ. ಈ ಪ್ರದೇಶದಲ್ಲಿ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ನಿರ್ವಹಣೆಯ ಬಗ್ಗೆ ನಿರ್ಲಕ್ಷ ತಾಳಿರುವುದರಿಂದ ಇಂತಹ ಅವಘಡಗಳು ಪದೇ ಪದೇ ಸಂಭವಿಸುತ್ತಿದ್ದು. ಹೆದ್ದಾರಿಯ ದುರವಸ್ಥೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES  ಇಬ್ಬರನ್ನು ಬಿಟ್ಟರು, ಆರು ಜನರನ್ನು ಬಂಧಿಸಿದರು? ಮತ್ತೆ ಉಲ್ಬಣವಾಗುವ ಹಂತದಲ್ಲಿ ಭಟ್ಕಳ ಪ್ರಕರಣ