ಭಟ್ಕಳ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ಮಣ್ಕುಳಿಯ ಸನಿಹ ರಸ್ತೆ ದಾಟುತ್ತಿದ್ದ ವೃದ್ಧ ಮಹಿಳೆಯೊಬ್ಬಳಿಗೆ ಲಾರಿಯೊಂದು ಡಿಕ್ಕಿ ಹೊಡೆದು ಮಹಿಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗದ ಘಟನೆ ವರದಿಯಾಗಿದೆ. ಗಾಯಗೊಂಡ ವೃದ್ಧ ಮಹಿಳೆಯನ್ನು ಮಾರುಕೇರಿಯ ಮಠದಹಿತ್ಲು ನಿವಾಸಿ ಪದ್ಮಾವತಿ ಭಟ್ ಎಂದು ಗುರುತಿಸಲಾಗಿದ್ದು, ಈಕೆ ಎಂದು ತಿಳಿದು ಬಂದಿದೆ. ಈಕೆ ಮಣ್ಕುಳಿಯಲ್ಲಿನ ರಾಷ್ಟ್ರೀಯ ಹೆದ್ದಾರಿ ದಾಟುತ್ತಿರುವ ವೇಳೆ ಕುಂದಾಪುರದಿoದ ಶಿರಾಲಿ ಅಳ್ವೆಕೋಡಿ ಸಮುದ್ರ ತೀರಕ್ಕೆ ಶಿಲೆಕಲ್ಲು ಹಾಕಲು ಹೋಗುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿದೆ.

RELATED ARTICLES  ಮಲೆನಾಡಿನಲ್ಲಿ ಮಂಗನ ಕಾಯಿಲೆ ಉಲ್ಬಣ

ಅಪಘಾತದ ಬಳಿಕ ವೃದ್ಧ ಮಹಿಳೆಯನ್ನು ಭಟ್ಕಳ ಸರ್ಕಾರಿ ಆಸ್ಪತ್ರೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತ ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ

RELATED ARTICLES  ಇಂದಿನ‌ ದಿನ ನಿಮಗೆ ಹೇಗಿದೆ ಗೊತ್ತೇ? 02/05/2019 ರ ದಿನ‌ ಭವಿಷ್ಯ ಇಲ್ಲಿದೆ ನೋಡಿ.