ಕಾರವಾರ : ತಾಲೂಕಿನ ತೋಡುರು ಜ್ವಾಲನಮಡಿ ಬೆಟ್ಟದ ಹಳ್ಳದಲ್ಲಿ ಅಪರಿಚಿತ ಪುರುಷನ ಶವ ಇಂದು ಪತ್ತೆಯಾಗಿದೆ. ಮೃತ ವ್ಯಕ್ತಿಗೆ ಅಂದಾಜು 45ರಿಂದ 50 ವರ್ಷ ಆಗಿರುವುದು ಎನ್ನಲಾಗಿದೆ. ಮೃತ ವ್ಯಕ್ತಿಯ ಬಲಕೈಯಲ್ಲಿ ಪಿ ಕೆ ಮಹೀಮ್ ಎಂದು ಅಚ್ಚೆ ಹಾಕಿರುವ ಗುರುತು ಇದ್ದು, ದುಂಡು ಮುಖ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಹಳ್ಳದಲ್ಲಿ ಕೊಚ್ಚಿಕೊಂಡು ಬಂದು ಶವ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಹಳ್ಳದಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ಬಗ್ಗೆ ತೋಡುರು ಗ್ರಾಮ ಪಂಚಾಯತ ಅಧ್ಯಕ್ಷರಾಗಿರುವ ಪೇರು ಗೌಡ ಎಂಬುವವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ವ್ಯಕ್ತಿಯ ಸಂಬಂಧಿಕರ ಬಗ್ಗೆ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.